ರೈತರ ಸಾಲಮನ್ನ ಮಾಡುವ ಸರಕಾರವಲ್ಲ

ರೈತರ ಸಾಲಮನ್ನ ಮಾಡುವ ಸರಕಾರವಲ್ಲ

ಕನಕಪುರ, ಡಿ. 11: ನಮ್ಮ ಸರಕಾರ ಇದ್ದಾಗ ಸಾಲಮನ್ನಾ ಮಾಡಿ ಎಂದು ಒತ್ತಾಯಿಸುತ್ತಿದ್ದರು. ಕೇಂದ್ರದಿಂದ ಒಂದು ಪೈಸೆಯೂ ಕೂಡ ಅನುದಾನ ತಂದಿರಲಿಲ್ಲ ಆದರೂಕೂಡ 2 ಲಕ್ಷದವರೆಗೂ ಸಾಲಮನ್ನಾ ಮಾಡಿದೆವು. ಆದರೆ, ಈಗಿನ ಸರಕಾರ ಸಾಲಮನ್ನಾದ ಬಗ್ಗೆ ಚಕಾರವೆತ್ತುತ್ತಿಲ್ಲ. ಸಾಲಮನ್ನಾವನ್ನೂ ಕೂಡ ಮಾಡುತ್ತಿಲ್ಲ ಎಂದು ಎಮ್.ಎಲ್.ಸಿ ಹಾಗೂ ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ  ಎಸ್.ರವಿ ತಿಳಿಸಿದರು.

ಕನಕಪುರ ತಾಲೂಕಿನ ಹಾರೋಹಳ್ಳಿಯ ಚಿಕ್ಕಕಲ್ಲುಬಾಳು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಬಿ.ಡಿ.ಸಿ.ಸಿ ಬ್ಯಾಂಕ್ ಮಾದರಿಯಾಗಿದ್ದು, ಬ್ಯಾಂಕ್ ವತಿಯಿಂದ ಸ್ವಸಹಾಯ ಸಂಘದ  ಮಹಿಳೆಯರಿಗೆ 10 ಲಕ್ಷ ರೂ ಸಾಲ ನೀಡುತ್ತಿದ್ದು, ಅದರಲ್ಲಿ 5 ಲಕ್ಷ ರೂಗೆ ಮಾತ್ರ ಬಡ್ಡಿ ನೀಡಬೇಕಾಗುತ್ತದೆ ಇನ್ನೊಂದು ಲಕ್ಷಕ್ಕೆ ಶೂನ್ಯ ಬಡ್ಡಿ ಇರುತ್ತದೆ ಮತ್ತು ಸಾಲ ಪಡೆದ ರೈತರು ನಿಗಧಿತ ಸಮಯದಲ್ಲಿ ಪಾವತಿ ಮಾಡಬೇಕು. ಚಿಕ್ಕಕ್ಲುಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 4 ಕೋಟಿ 20 ಲಕ್ಷ ಸಾಲ ಮನ್ನಾ ಆಗಿದೆ. ಮತ್ತೇ ಸಾಲ ಮನ್ನಾ ಮಾಡುವುದು ಈ ಸರಕಾರದಿಂದ ಸಾಧ್ಯವಿಲ್ಲ ಕೇವಲ ಅಧಿಕಾರಕ್ಕಾಗಿ ಮಾತ್ರ ರೈತರ ಹೆಸರನ್ನು ಬಳಸುತ್ತಾರೆ ರೈತರ ಕಷ್ಟಗಳನ್ನು ಕೇಳುವ ಸರಕಾರವಲ್ಲ  ಎಂದು ಕಿಡಿ ಕಾರಿದರು.

ಇದೇ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಸಿದ್ದರಾಮಯ್ಯ ಸರಕಾರ ಆಧಿಕಾರದಲ್ಲಿದ್ದಾಗ ರಾಜ್ಯದ  ಪ್ರತಿಯೊಬ್ಬ ರೈತರಿಗೂ 50000 ಸಾಲ ಮನ್ನಾ ಮಾಡಿದರು ಕುಮಾರಸ್ವಾಮಿಯವರು ಇದನ್ನೇ ದೊಡ್ಡ ವಿಷಯವನ್ನಾಗಿ ತೆಗೆದುಕೊಂಡು 2 ಲಕ್ಷದವರೆಗೆ ಸಾಲದ ಹೊರೆ ಕಡಿಮೆ ಮಾಡಿದರು. ಒಟ್ಟು ಆ ಸಮಯದಲ್ಲಿ 17 ಸಾವಿರ ಕೋಟಿ ಸಾಲ ಮನ್ನಾ ಆಗಿದೆ.

ಸಮ್ಮಿಶ್ರ ಸರಕಾರವು ರೈತರ ದೊಡ್ಡ ಹೊರೆಯನ್ನು ಇಳಿಸಿದ್ದು ಮತ್ತು ಒಂದು ಲೀಟರ್ ಹಾಲಿಗೆ 6 ರೂ ಪ್ರೋತ್ಸಾಹ ಧನವನ್ನು ಹೆಚ್ಚಿಸಿದ್ದು ಸಮ್ಮಿಶ್ರ ಸರಕಾರದ ಸಾಧನೆಯಾಗಿದೆ ಹಾಗೂ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸಹಕಾರ ಸಂಘಗಳಿಂದ ಪಡೆದ ಸಾಲಗಳಿಂದಲ್ಲ ಬದಲಾಗಿ ಮೀಟರ್ ಬಡ್ಡಿ ಧಂಧೆಗೆ ಸಿಲುಕಿ ಅನೇಕ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಶಿವಾನಂದ ಶಿವಾಚರ್ಯ ಸ್ವಾಮೀಜಿ, ತಾ.ಪಂ.ಸದಸ್ಯ ರತ್ನಮ್ಮ ಸಿದ್ದರಾಜು, ಕೊಟ್ಟಗಾಳು ಗ್ರಾ.ಪಂ.ಅಧ್ಯಕ್ಷಸುರೇಶ್, ಉಪಾಧ್ಯಕ್ಷ ಗೀತಾ ರಾಜಶೇಖರ್, ಮಾಜಿ.ತಾ.ಪಂ ಸದಸ್ಯ ಕೃಷ್ಣಯ್ಯ ತಿಮ್ಮಶೆಟ್ಟಿ, ಕೃಷ್ಣಮೂರ್ತಿ, ಗುರುಮೂರ್ತಿ, ಸಂಘದ ಅಧ್ಯಕ್ಷ ಪಿ.ಎಸ್ ಜಗದೀಶ್, ಉಪಾಧ್ಯಕ್ಷ ಎಂ.ಬಿ.ನಂಜುಡಯ್ಯ, ಕಾರ್ಯನಿರ್ವಹಣಾಧಿಕಾರಿ ಸಿ.ಎಲ್.ಪುಟ್ಟಸ್ವಾಮಿ ಇನ್ನಿತರರು ಹಾಜರಿದ್ದರು.

 

 

 

 

ಫ್ರೆಶ್ ನ್ಯೂಸ್

Latest Posts

Featured Videos