ಇಸ್ರೇಲ್ ನ ಸತತ 5ನೇ ಬಾರಿಗೆ ಪ್ರಧಾನಿಯಾಗಿ ಬೆಂಜಮಿನ್ ನೇತನ್ಯಾಹು ದಾಖಲೆ

ಇಸ್ರೇಲ್ ನ ಸತತ 5ನೇ ಬಾರಿಗೆ ಪ್ರಧಾನಿಯಾಗಿ ಬೆಂಜಮಿನ್ ನೇತನ್ಯಾಹು ದಾಖಲೆ

ಜೆರುಸಲೆಂ, ಏ. 10, ನ್ಯೂಸ್ ಎಕ್ಸ್ ಪ್ರೆಸ್:   ಇಸ್ರೇಲ್ ನಲ್ಲಿ ಬೆಂಜಮಿನ್ ನೇತನ್ಯಾಹೂ ಸತತ 5ನೇ ಬಾರಿಗೆ ಇಸ್ರೇಲ್ ನ್ಯಾಷನಲ್ ಎಲೆಕ್ಷನ್ ನಲ್ಲಿ ಜಯಭೇರಿ ಬಾರಿಸಿ ದಾಖಲೆ ಬರೆದಿದ್ದಾರೆ.

ಈ ಬಾರಿ ಬೆನ್ನಿ ಗ್ಯಾಂಟ್ಸ್ ಜೊತೆಗಿನ ನೆಕ್ ಟು ನೆಕ್ ಫೈಟ್ ನಲ್ಲಿ ಬೆಂಜಮಿನ್ ಚುನಾವಣೆ ಗೆದ್ದಿದ್ದಾರೆ. ಶೇ. 97ರಷ್ಟು ಮತ ಎಣಿಕೆ ಮುಗಿದರೂ ಈ 2 ನಾಯಕರಲ್ಲಿ ಯಾರ ಪಕ್ಷವೂ ಬಹುಮತ ಪಡೆದಿರಲಿಲ್ಲ. ಆದರೆ, ನೇತನ್ಯಾಹು ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಮೇಲುಗೈ ಹೊಂದಿದ್ದು, ಅವರೇ ಪ್ರಧಾನಿಯಾಗಿ ಮುಂದುವರೆಯಲು ಹಾದಿ ಸಲೀಸಾಗಿದೆ. ಹೀಗಾಗಿ ಅವರೇ ಈ ಚುನಾವಣೆ ಗೆದ್ದಿದ್ದಾರೆ ಎಂದು ಇಲ್ಲಿನ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

ಚುನಾವಣೆಯಲ್ಲಿ ನೇತನ್ಯಾಹೂ ಅವರ ಲೈಕುಡ್ ಪಾರ್ಟಿ ಹಾಗೂ ಗ್ಯಾಂಟ್ಸ್  ಅವರ ಹೊಸ ಸೆಂಟ್ರಿಸ್ಟ್ ಬ್ಲೂ ಆ್ಯಂಡ್ ವೈಟ್ ಪಾರ್ಟಿ ಎರಡೂ 35 ಸೀಟ್ಗಳನ್ನ ಗೆದ್ದಿವೆ. ಈಗ ಲೈಕುಡ್ ಪಾರ್ಟಿ ಇತರೆ ಪಕ್ಷಗಳೊಂದಿಗೆ ಮೃತ್ರಿ ಮಾಡಿಕೊಳ್ಳಲು ಮುಂದಾಗಿದ್ದು, 5 ಸೀಟ್ ಗಳನ್ನ ಗಳಿಸಲಿದೆ. ಶುಕ್ರವಾರದ ವೇಳೆಗೆ ಅಂತಿಮ ಫಲಿತಾಂಶ ಬರಲಿದೆ.

ಮೈತ್ರಿಯೊಂದಿಗೆ ನೆತನ್ಯಾಹೂ ಅಧಿಕಾರ ಹಿಡಿದರೆ, ಇಸ್ರೇಲ್ನ 71 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿಯಾಗಲಿದ್ದಾರೆ. ಈಗಾಗಲೇ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ನೇತನ್ಯಾಹೂ ಹೇಳಿದ್ದಾರೆ. 2009ರಿಂದ ನೇತನ್ಯಾಹೂ ಇಸ್ರೇಲ್ ಪ್ರಧಾನಿಯಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos