ಕ್ಷಮೆ ಯಾಚನೆ ಮೂಲಕ ವಿವಾದಕ್ಕೆ ಇತಿಶ್ರೀ

ಕ್ಷಮೆ ಯಾಚನೆ ಮೂಲಕ ವಿವಾದಕ್ಕೆ ಇತಿಶ್ರೀ

ಬೆಂಗಳೂರು, ನ. 20: ಕನಕದಾಸರ ಕುರಿತಂತೆ ವಿವಾದಾತ್ಮಕ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುರುಬ ಸಮುದಾಯದ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ಸುಖಾಂತ್ಯ ಹಾಡಿದ್ದಾರೆ. ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿರುವುದರ ಜೊತೆಗೆ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಭೀತಿಯಿಂದ ಖುದ್ದು ಸಿಎಂ ಕುರುಬ ಸಮುದಾಯದ ಕ್ಷಮೆ ಕೇಳಿ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಸಚಿವ ಜೆ.ಸಿ.ಮಾಧುಸ್ವಾಮಿ ಒಂದು ವೇಳೆ ಆತುರದಲ್ಲಿ ಏನಾದರೂ ಆ ಸಮುದಾಯದ ಬಗ್ಗೆ ತಪ್ಪಾಗಿ ಮಾತನಾಡಿದ್ದರೆ ನಾನೇ ಕ್ಷಮೆ ಕೇಳುತ್ತೇನೆ. ಈ ಬಗ್ಗೆ ಒಂದೇ ಒಂದು ಶಬ್ದವನ್ನೂ ಯಾರೊಬ್ಬರು ಮಾತಾಡಬಾರದೆಂದು ಮನವಿ ಮಾಡಿದರು. ಮಹಾಸಂತ ಕನಕದಾಸರ ಬಗ್ಗೆ ಎಲ್ಲರಿಗೂ ಅಪಾರವಾದ ಗೌರವವಿದೆ. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಆ ಸ್ಥಳವನ್ನು ಅಭಿವೃದ್ಧಿ ಪಡಿಸಿದ್ದೆ. ನನಗೆ ವೈಯಕ್ತಿಕವಾಗಿ ಅವರ ಹಾಗೂ ಸಮುದಾಯವರ ಬಗ್ಗೆ ಅಪಾರವಾದ ಗೌರವವಿದೆ. ಇದರಲ್ಲಿ ಯಾರೂ ಕೂಡ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದರು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ವೃತ್ತದಲ್ಲಿ ಕನಕದಾಸರ ಹೆಸರಿಡಲು ಯಾವುದೇ ತಕರಾರು ಇಲ್ಲ. ಇದು ಸಂವಹನದ ಕೊರತೆಯಿಂದ ಉಂಟಾಗಿರುವ ಗೊಂದಲ. ಮಾಧುಸ್ವಾಮಿ ಅವರು ಈಗಾಗಲೇ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನಾನೇ ಆ ವೃತ್ತಕ್ಕೆ ಕನಕದಾಸರ ಹೆಸರಿಡುವಂತೆ ಸೂಚಿಸಿದ್ದೇನೆ.ವಿವಾದವನ್ನು ಇಲ್ಲಿಗೆ ಕೊನೆಗಾಣಿಸಬೇಕು. ಇದು ಮುಗಿದ ಅಧ್ಯಾಯ ಎಂದು ಸ್ಪಷ್ಟಪಡಿಸಿದರು.

ಹುಳಿಯಾರಿನ ವೃತ್ತಕ್ಕೆ ಕನಕದಾಸರ ಹೆಸರು ನಾಮಕರಣ ಮಾಡುವ ಸಂಬಂಧ ಕಾಗಿನೆಲೆ ಪೀಠಾಧ್ಯಕ್ಷರು ಮತ್ತು ಸಚಿವ ಮಾಧುಸ್ವಾಮಿ ನಡುವೆ ಮಾತಿಗೆ ಮಾತು ಬೆಳೆದು ವಿವಾದ ಉಂಟಾಗಿತ್ತು. ಶ್ರೀಗಳನ್ನು ಉದ್ದೇಶಪೂರ್ವಕವಾಗಿ ಮಾಧುಸ್ವಾಮಿ ಅಪಮಾನಿಸಿದ್ದಾರೆ ಎಂದು ಕುರುಬ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದ್ದರು. ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos