ಬ್ರೌನ್ ಬ್ರೆಡ್ ಸೇವನೆ ಆರೋಗ್ಯಕ್ಕೆ ಉತ್ತಮನಾ!

ಬ್ರೌನ್ ಬ್ರೆಡ್ ಸೇವನೆ ಆರೋಗ್ಯಕ್ಕೆ ಉತ್ತಮನಾ!

ಬೆಂಗಳೂರು: ನಮ್ಮ ಜೀವನದಲ್ಲಿ ನಾವು ದಿನನಿತ್ಯ ಬಳಸುವಂತಹ ಪದಾರ್ಥಗಳಲ್ಲಿ ಒಂದಾದ ಬ್ರೆಡ್ ಅನ್ನು ನಾವು ದಿನನಿತ್ಯ ನಮ್ಮ ಜೀವನದಲ್ಲಿ ಬಳಸುತ್ತಿದ್ದೇವೆ. ಆದರೆ ಹಲವಾರು ಜನ ಬ್ರೌನ್ ಬ್ರೆಡ್ ಅನ್ನು ಉಪಯೋಗಿಸುತ್ತಾರೆ ಬೋನ್ ರೆಡ್ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಎಂದು ತಿಳಿಯೊಣ ಬನ್ನಿ.
ಇಂದಿನ ಯುವ ಪೀಳಿಗೆಯು ಏನನ್ನೇ ಖರೀದಿಸಿದರೂ, ಅದನ್ನು ಮೊದಲು ಎಲ್ಲಾ ರೀತಿಯಲ್ಲಿಯೂ ಪರಿಶೀಲಿಸಿ ನೋಡುತ್ತಾರೆ. ಯಾವ ವಸ್ತುವನ್ನು ತಿನ್ನುವುದಕ್ಕೆ ಆರಿಸಿಕೊಂಡರೂ ಆರೋಗ್ಯ ದೃಷ್ಟಿಯಿಂದ ಅದು ಎಷ್ಟು ಪ್ರಯೋಜನಕಾರಿ ಎನ್ನುವುದನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ. ಕಂಪನಿಗಳು ಕೂಡಾ ಜನರ ಈ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿವೆ. ಹಾಗಾಗಿ ತಮ್ಮ ಉತ್ಪನ್ನಗಳನ್ನು ಆರೋಗ್ಯಕರವೆಂದು ಲೇಬಲ್ ಮಾಡಿಕೊಂಡೇ ಮಾರಾಟ ಮಾಡುತ್ತವೆ. ಬ್ರೌನ್ ಬ್ರೆಡ್ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಸಾಮಾನ್ಯವಾಗಿ ಬ್ರೌನ್ ಬ್ರೆಡ್ ಬ್ರೆಡ್ ಅನ್ನು ಆರೋಗ್ಯಕರವೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಜನ ವೈಟ್ ಬ್ರೆಡ್ ಬದಲು ಬ್ರೌನ್ ಬ್ರೆಡ್ ನತ್ತ ವಾಲುತ್ತಿದ್ದಾರೆ. ಆದರೆ ನಿಜ ಸಂಗತಿ ಬೇರೆಯೇ ಇದೆ. ವೈಟ್ ಬ್ರೆಡ್ ಗೊಂತ ಬ್ರೌನ್ ಬ್ರೆಡ್ ಹೆಚ್ಚು ಅಪಾಯಕಾರಿಯಾಗಿದೆ.
ಬ್ರೌನ ಬ್ರೆಡ್ ತಯಾರಿಸಲು ಕೂಡಾ ಮೈದಾವನ್ನು ಬಳಸಲಾಗುತ್ತದೆ. ಆದರೆ ಈ ಮೈದಾವನ್ನು ಗೋಧಿಯಿಂದ ತಯಾರಿಸಲಾಗುತ್ತದೆ. ಇದು ಹೊಟ್ಟು ಮತ್ತು ಸೂಕ್ಷ್ಮಾಣುಗಳನ್ನು ಹೊಂದಿರುವುದಿಲ್ಲ. ಹೊಟ್ಟು ಮತ್ತು ಸೂಕ್ಷ್ಮಾಣು ಗೋಧಿಯಲ್ಲಿ ಕಂಡುಬರುವ ಪೋಷಕಾಂಶಗಳ ಮುಖ್ಯ ಮೂಲಗಳಾಗಿವೆ. ಆದ್ದರಿಂದ, ವೈಟ್ ಬ್ರೆಡ್‌ಗೆ ಹೋಲಿಸಿದರೆ ಬ್ರೌನ್ ಬ್ರೆಡ್‌ನಲ್ಲಿನ ಪೋಷಕಾಂಶಗಳ ಪ್ರಮಾಣವು ಕಡಿಮೆಯಾಗಿದೆ. ಫಿಟ್ನೆಸ್ ಪ್ರಜ್ಞೆ ಇರುವವರು ಬ್ರೌನ್ ಬ್ರೆಡ್ ಖರೀದಿಸುವಾಗ ಜಾಗರೂಕರಾಗಿರಬೇಕು. ಬ್ರೌನ್ ಬ್ರೆಡ್ ನ ಲೇಬಲ್ ಅನ್ನು ಎಚ್ಚರಿಕೆಯಿಂದ ಓದಿದರೆ ಈ ಸತ್ಯ ನಿಮಗೂ ತಿಳಿಯುತ್ತದೆ. ಬ್ರೌನ್ ಬ್ರೆಡ್ ಹೊಟ್ಟು ಮತ್ತು ಸೂಕ್ಷ್ಮಾಣು ಹೊಂದಿಲ್ಲದಿದ್ದರೆ, ಅದು ಅನಾರೋಗ್ಯಕರವಾಗಿರುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos