ಆಲೂಗಡ್ಡೆ ಸೇವನೆ ನಮ್ಮ ಅರೋಗ್ಯಕ್ಕೆ ಹಾನಿಕಾರಕನಾ!

ಆಲೂಗಡ್ಡೆ ಸೇವನೆ ನಮ್ಮ ಅರೋಗ್ಯಕ್ಕೆ ಹಾನಿಕಾರಕನಾ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆಯಾಗಿದೆ ಏಕೆಂದರೆ ನಾವು ತಿನ್ನುವ ಪದಾರ್ಥಗಳಲ್ಲಿ ಹಲವಾರು ಪೌಷ್ಟಿಕಾಂಶಗಳ ಕೊರತೆ ಇರುವುದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಅದೇ ತರ ಆಲೂಗಡ್ಡೆಯನ್ನು ನಾವು ದಿನನಿತ್ಯ ಬಳಸುವುದರಿಂದ ನಮ್ಮ ಆರೋಗ್ಯ ಉತ್ತಮವಾಗುತ್ತದಾ. ಎಂದು ತಿಳಿದುಕೊಳ್ಳೋಣ ಬನ್ನಿ
ಮಾರ್ಕೆಟ್ ಗೆ ಹೋದಾಗ ಯಾವ ತರಕಾರಿ ತರಲಿ ಬಿಡಲಿ ಆಲೂಗಡ್ಡೆ ಮಾತ್ರ ಬ್ಯಾಗ್ ನಲ್ಲಿ ಇದ್ದೇ ಇರುತ್ತೆ. ಅದನ್ನು ಆಪದ್ಭಾಂದವ ಅಂತಾ ಕರೆದ್ರೂ ತಪ್ಪಾಗೋದಿಲ್ಲ. ಎಲ್ಲ ತರಕಾರಿ ಜೊತೆ ಹೊಂದಿಕೊಳ್ಳುವ ಆಲೂಗಡ್ಡೆ, ಮನೆಗೆ ಅತಿಥಿಗಳು ಬಂದಾಗ ಪ್ರಮುಖ ಸ್ಥಾನ ಪಡೆಯುತ್ತದೆ. ಆಲೂಗಡ್ಡೆ ಸಾಂಬಾರ್ ನಿಂದ ಹಿಡಿದು ಆಲೂಗಡ್ಡೆ ಪಕೋಡಾ, ಆಲೂ ಬಜ್ಜಿ, ಆಲೂ ಚಿಪ್ಸ್, ಆಲೂ ಸಬ್ಜಿ ಹೀಗೆ ಆಲೂಗಡ್ಡೆಯಲ್ಲಿ ನಾವು ವೆರೈಟಿ ಫುಡ್ ಸಿದ್ಧಪಡಿಸಬಹುದು. ಬೀದಿ ಬದಿಯಲ್ಲಿ ಸಿಗುವ ಪಾನಿಪುರಿಯಿಂದ ಹಿಡಿದು ಫಾಸ್ಟ್ ಫುಡ್ ಬರ್ಗರ್ ವರೆಗೆ ಎಲ್ಲದಕ್ಕೂ ಈ ಆಲೂಗಡ್ಡೆ ಇಲ್ಲದೆ ಕೆಲಸ ಆಗಲ್ಲ.
ಆಲೂಗಡ್ಡೆಯಲ್ಲಿ ಪಿಷ್ಟ ವಿದೆ. ಇದನ್ನು ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ. ಆಲೂಗಡ್ಡೆ ಬಹಳಷ್ಟು ಕ್ಯಾಲೋರಿಗಳನ್ನು ಹೊಂದಿರುತ್ತದೆ. ನೀವು ಆಲೂಗಡ್ಡೆ ಸೇವನೆ ಮಾಡೋದ್ರಿಂದ ನಿಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ. ದಿನವಿಡೀ ನೀವು ಉತ್ಸಾಹದಿಂದ ಕೆಲಸ ಮಾಡಬಹುದು. ಆದ್ರೆ ಆಲೂಗಡ್ಡೆಯನ್ನು ನೀವು ಹೇಗೆ ಸೇವನೆ ಮಾಡ್ತಿರಿ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಬಹುತೇಕ ಆಲೂಗಡ್ಡೆ ಆಹಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಬಳಕೆ ಮಾಡಲಾಗುತ್ತದೆ. ಎಣ್ಣೆಯಲ್ಲಿ ಬೇಯಿಸಿದ ಅಥವಾ ಕರಿದ ಆಲೂಗಡ್ಡೆ ತಿನ್ನುವುದ್ರಿಂದ ಅನಾರೋಗ್ಯ ಕಾಡುತ್ತದೆ. ನಿಮ್ಮ ತೂಕದಲ್ಲೂ ಏರಿಕೆ ಕಂಡು ಬರುತ್ತದೆ. ತೂಕ ನಿಯಂತ್ರಣಕ್ಕೆ ಬರಬೇಕು ಎನ್ನುವವರು ಕರಿದ ಆಲೂಗಡ್ಡೆ ಸೇವನೆ ಮಾಡುವ ಬದಲು ಕಡಿಮೆ ಕ್ಯಾಲೋರಿ ಹೊಂದಿರುವ ಬೇರೆ ಆಹಾರ ಸೇವನೆ ಮಾಡಬೇಕು. ಇದರಿಂದ ನಿಮ್ಮ ತೂಕವನ್ನು ನೀವು ನಿಯಂತ್ರಿಸಬಹುದು.
ಮೊದಲೇ ಹೇಳಿದಂತೆ ಆಲೂಗಡ್ಡೆಯಲ್ಲಿ ಪಿಷ್ಟವಿದ್ದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆಲೂಗಡ್ಡೆಯನ್ನು ನೀವು ಒಂದು ತಿಂಗಳು ತ್ಯಜಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅದರಲ್ಲೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಆಲೂಗಡ್ಡೆಯನ್ನು ಅಪರೂಪಕ್ಕೆ ಸೇವನೆ ಮಾಡೋದು ಒಳ್ಳೆಯದು.
ಒಂದ್ವೇಳೆ ನೀವು ನಿಮ್ಮ ಡಯಟ್ ನಲ್ಲಿ ಆಲೂಗಡ್ಡೆ ಸೇರಿಸಿಕೊಂಡಿಲ್ಲವೆಂದಾದ್ರೆ ಈ ನೆಪದಲ್ಲಿ ನೀವು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುತ್ತೀರಿ. ಇದರಿಂದಾಗಿ ನಿಮ್ಮ ಜೀರ್ಣಕ್ರಿಯೆಯೂ ಸುಧಾರಿಸಬಹುದು.

ಫ್ರೆಶ್ ನ್ಯೂಸ್

Latest Posts

Featured Videos