ಈರುಳ್ಳಿ ಉಪ್ಪಿನಕಾಯಿ!

ಈರುಳ್ಳಿ ಉಪ್ಪಿನಕಾಯಿ!

ಬೆಂಗಳೂರು, ಸೆ. 11 : ಮಾವಿನಕಾಯಿ, ನಿಂಬೆಕಾಯಿ ಉಪ್ಪಿನಕಾಯಿ ತಿಂದೂ ತಿಂದೂ ನಾಲಿಗೆ ಉಪ್ಪಿನಕಾಯಿ ಡಬ್ಬ ನೋಡಿದರೆ ಗೋಳೋ ಎನ್ನುತ್ತಿದೆಯಾ? ಚಟ್ನಿಪುಡಿ, ತೊಕ್ಕು ಕೂಡಾ ಬೇಸರ ಬಂದು ತುಕ್ಕು ಹಿಡಿಸಿಕೊಂಡು ಅಡುಗೆಕೋಣೆಯ ಮೂಲೆಯಲ್ಲಿ ಕುಳಿತಿರಬೇಕಲ್ಲವೇ? ನಂಚಿಕೊಳ್ಳಲು ಹೊಸತೇನಾದರೂ ತರಬೇಕು ಎಂದುಕೊಂಡು ತಿಂಗಳುಗಟ್ಟಲೆ ಮುಂದೂಡುತ್ತಲೇ ಇದ್ದೀರಾ? ಹಾಗಿದ್ದರೆ ಟ್ರೈ ಮಾಡಿ ನೋಡಿ ಈರುಳ್ಳಿ ಉಪ್ಪಿನಕಾಯಿ.
ಏನು ಈರುಳ್ಳಿಯಲ್ಲಿ ಉಪ್ಪಿನಕಾಯಾ ಎಂದು ಬಾಯಿ ಬಾಯಿ ಬಿಡುವ ಬದಲು ತಯಾರಿಸಿ ರುಚಿ ನೋಡಿ… ನಿಮ್ಮ ನಾಲಿಗೆ ಖಂಡಿತಾ ನಿಮಗೆ ಥ್ಯಾಂಕ್ಸ್ ಹೇಳುವುದು. ಜೊತೆಗೆ ಒಂದೆರಡು ತುತ್ತು ಹೆಚ್ಚೇ ಹೊಟ್ಟೆಗಿಳಿಯುವುದು.
ಅಪ್ಪೆಕಾಯಿ ಮಾವಿನಮಿಡಿ, ನಿಂಬೆಕಾಯಿ ಉಪ್ಪಿನಕಾಯಿಗೆ ಫೇಮಸ್ ಆದರೂ ಕೌಳಿ, ನೆಲ್ಲಿಕಾಯಿ, ಟೊಮ್ಯಾಟೋ, ಹಸಿಮೆಣಸು, ಬೆಳ್ಳುಳ್ಳಿ, ಈರುಳ್ಳಿ ಮುಂತಾದ ತರಕಾರಿಗಳಿಂದಲೂ ಉಪ್ಪಿನಕಾಯಿ ತಯಾರಿಸಬಹುದು.

ಫ್ರೆಶ್ ನ್ಯೂಸ್

Latest Posts

Featured Videos