ಪುಟಿದೇಳುತ್ತಾ ಐರ್ಲೆಂಡ್‌!

ಪುಟಿದೇಳುತ್ತಾ ಐರ್ಲೆಂಡ್‌!

ಇಂದು ಭಾರತ-ಐರ್ಲೆಂಡ್ ನಡುವಿನ ಮೂರನೇ ಟಿ20 ಕದನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಭಾರತ ತಂಡವು ಆಡಿದ ಎರಡು ಟಿ20 ಪಂದ್ಯದಲ್ಲಿ ಭಾರತ ತಂಡವು ಅತ್ಯಂತ ರೋಚಕದಿಂದ ಜಯಭೇರಿ ಸಾಧಿಸಿದೆ. ಹಾಗೂ ಹೊಸಬರಿಂದಲೇ ಕೂಡಿದ ಈ ಭಾರತ ತಂಡದ ಮೇಲೆ ಎಲ್ಲರ ಗಮನ. ಆದರೆ ಹೊಸ ಆಟಗಾರರ ಆಟವನ್ನು ಕಂಡು ಎಲ್ಲಾ ಭಾರತೀಯರು ದಂಗಾಗಿದ್ದಾರೆ. ಇವರೇ ನಮ್ಮ ಭವಿಷ್ಯದ ಆಟಗಾರರೆಂದು ಸಂತೋಷ ಪಡುತ್ತಿದ್ದಾರೆ. ಭಾರತ ತಂಡವು ಈ ಪಂದ್ಯದಲ್ಲಿ ಕೊಂಚ ಬದಲಾವಣೆ ಮಾಡುವ ಸಾಧ್ಯತೆಯಿದ್ದು, ಈ ಪಂದ್ಯದಲ್ಲಿ ಬೇರೆ ಆಟಗಾರರಿಗೆ ಅವಕಾಶ ಪಲ್ಪಿಸಬಹುದಾಗಿದೆ. ಭಾರತದ ಬೌಲರ್‌ಗಳು ಈ ಎರಡೂ ಪಂದ್ಯದಲ್ಲಿ ಚೆನ್ನಾಗಿ ಮಿಂಚಿದ್ದರು,ಇವತ್ತೀನ ಪಂದ್ಯದಲ್ಲೂಅವರ ಕ್ಷಮತೆಯನ್ನು ತೊರಬೇಕ್ಕಾಗಿದೆ.
ಐರ್ಲೆಂಡ್‌ ಟಿ20ಯಲ್ಲಿ ಅಬ್ಬರಿಸುವ ತಂಡ ಎನಿಸಿಕೊಂಡಿದ್ದರೂ ಈ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಆದರೆ ಬಾಲ್ಬರ್ನಿ ಕಳೆದ ಪಂದ್ಯದಂತೆಯೇ ಅಬ್ಬರಿಸಲು ಕಾಯುತ್ತಿದ್ದಾರೆ. ಸಂಘಟಿತ ಪ್ರದರ್ಶನ ತೋರಿದರಷ್ಟೇ ಕ್ಲೀನ್‌ಸ್ವೀಪ್‌ ಮುಖಭಂಗದಿಂದ ಪಾರಾಗಬಹುದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos