ಇರಾನ್ ಕ್ಷಣಾರ್ಧದಲ್ಲೆ ಧ್ವಂಸ : ಟ್ರಂಪ್ ಎಚ್ಚರಿಕೆ

ಇರಾನ್ ಕ್ಷಣಾರ್ಧದಲ್ಲೆ ಧ್ವಂಸ : ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್ ,ಜ. 5 : ನಮ್ಮ ಮೇಲೆ ಪ್ರತಿ ದಾಳಿ ನಡೆದರೆ ಇರಾನ್ನ 52 ಸ್ಥಳಗಳು ಕ್ಷಣಮಾತ್ರದಲ್ಲಿ ಧ್ವಂಸವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಪ್ರತಿ ದಾಳಿಗೆ ಸಂಚು ರೂಪಿಸುತ್ತಿರುವ ಇರಾನ್ಗೆ ಬಿಸಿ ಮುಟ್ಟಿಸಿದ್ದಾರೆ.

ಶುಕ್ರವಾರ ಮುಂಜಾನೆ ಬಾಗ್ದಾದ್ನಲ್ಲಿ ರಾಕೆಟ್ ದಾಳಿ ನಡೆಸುವ ಮೂಲಕ ಇರಾನ್ ಮೇಜರ್ ಜನರಲ್ ಖಾಸಿಂ ಸೊಲೆಮನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಇದಾದ ಬೆನ್ನಲ್ಲೇ ಕೆಂಡಕಾರಿದ್ದ ಇರಾನ್, “ಅಮೆರಿಕ ಇಂತಹ ಅಪಾಯಕಾರಿ ಹಾಗೂ ಬುದ್ಧಿಹೀನ ಕೃತ್ಯಕ್ಕೆ ಕೈ ಹಾಕಬಾರದಿತ್ತು. ಇದರ ಮುಂದಿನ ಪರಿಣಾಮಗಳನ್ನು ಅಮೆರಿಕ ಖಂಡಿತವಾಗಿಯೂ ಅನುಭವಿಸಲಿದೆ,” ಎಂದು ಹೇಳಿತ್ತು. ಈ ಮೂಲಕ ಪ್ರತಿ ದಾಳಿಯ ಎಚ್ಚರಿಕೆ ನೀಡಿತ್ತು.

ಫ್ರೆಶ್ ನ್ಯೂಸ್

Latest Posts

Featured Videos