ಪಾಕಿಸ್ತಾನದ ಐಪಿಎಲ್ ‘ಫ್ಯಾನ್ಸ್’ ಗೆ ನಿರಾಶೆ

ಪಾಕಿಸ್ತಾನದ ಐಪಿಎಲ್ ‘ಫ್ಯಾನ್ಸ್’ ಗೆ ನಿರಾಶೆ

ಮಾ.22, ನ್ಯೂಸ್ ಎಕ್ಸ್ ಪ್ರೆಸ್: ದೇಶದೆಲ್ಲೋಡೆ ಐಪಿಎಲ್ ಎಂದರೆ ಕ್ರಿಕೆಟ್ ಪ್ರಿಯರಿಗೆ ತುಂಬಾನೇ ಹುಚ್ಚು, ಇನ್ನೇನು 12ನೇ ಐಪಿಎಲ್ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಮಾ. 23ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಮೊದಲ ಪಂದ್ಯ ನಡೆಯಲಿದ್ದು, ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಶುರುವಾದರೆ ಸಾಕು ಹಣದ ಹೊಳೆಯೇ ಹರಿಯುತ್ತದೆ. ಇದರ ಜೊತೆಗೆ ಹೊಸ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಸ್ಟಾರ್ ಆಟಗಾರರ ಜೊತೆ ಈ ಹೊಸ ಪ್ರತಿಭೆಗಳು ತಮ್ಮ ಆಟದ ನೈಪುಣ್ಯ ಪ್ರದರ್ಶಿಸಲಿದ್ದಾರೆ.

ಐಪಿಎಲ್ ಪಂದ್ಯಾವಳಿಗಳನ್ನು ವೀಕ್ಷಿಸಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಮಧ್ಯೆ ಪಾಕಿಸ್ತಾನದ ಐಪಿಎಲ್ ಫ್ಯಾನ್ಸ್ ಗೆ ಮಾತ್ರ ನಿರಾಶೆಯಾಗಿದೆ.

ಪ್ರಸ್ತುತ ಭಾರತ ಹಾಗೂ ಪಾಕ್ ನಡುವಿನ ಸಂಬಂಧ ಹದಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡಬಾರದೆಂದು ಅಲ್ಲಿನ ದೃಶ್ಯ ಮಾಧ್ಯಮಗಳಿಗೆ ಪಾಕ್ ಸರ್ಕಾರದಿಂದ ಸೂಚನೆ ನೀಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos