ಐಪಿಎಲ್ ಬೆಟ್ಟಿಂಗ್ ಮೂವರ ಬಂಧನ

ಐಪಿಎಲ್ ಬೆಟ್ಟಿಂಗ್ ಮೂವರ ಬಂಧನ

ಮಂಗಳೂರು, ಏ. 10, ನ್ಯೂಸ್ ಎಕ್ಸ್ ಪ್ರೆಸ್: 2019ರ ಐಪಿಎಲ್ ಕ್ರಿಕೆಟ್ ಪಂದ್ಯಾಟಗಳು ಆರಂಭವಾಗುತ್ತಿದ್ದಂತೆ ಬೆಟ್ಟಿಂಗ್ ದಂಧೆ ಕೂಡ ಜೋರಾಗಿ ನಡೆಯಲಾರಂಭಿಸಿದೆ. ಮಂಗಳೂರಿನಲ್ಲಿ ಸಿಸಿಬಿ ಪೊಲೀಸರ ತಂಡ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿ 3 ಜನ ಆರೋಪಿಗಳನ್ನು ಬಂಧಿಸಿದೆ.

ನಗರದ ಮಠದಕಣಿಯಲ್ಲಿ ಮೊಬೈಲ್ ಆಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಮಠದಕಣಿ ನಿವಾಸಿಗಳಾದ ಸುನಿಲ್ ಮೆಲ್ವಿನ್ ರೇಗೋ (42), ಸಂತೋಷ್ ಜಾನ್ (47) ಹಾಗೂ ಉಳ್ಳಾಲಬೈಲು ನಿವಾಸಿ ಅಶೋಕ್ ಅಂಚನ್ (46) ಎಂದು ಗುರುತಿಸಲಾಗಿದೆ.

ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ ದಂಧೆಗಾಗಿ ‘ಬೆಟ್ಪ್ರೊ’ ಮೊಬೈಲ್ ಆಪ್ ಡೌನ್ಲೋಡ್ ಮಾಡಿದ ಗ್ರಾಹಕರಿಗೆ ಹಣವನ್ನು ರಿಚಾರ್ಜ್ ಮಾಡುವುದು ಹಾಗೂ ಪಾಸ್ವರ್ಡ್ಗಾಗಿ ಹಣವನ್ನು ಸಂಗ್ರಹಿಸುತ್ತಿದ್ದರು.

ನಂತರ ವಿದೇಶದಲ್ಲಿರುವ ಅರುಣ್ ಮೊಂತೆರೋ ಹಾಗೂ ಕಿರಣ್ ಎಂಬುವವರಿಗೆ ಹಣವನ್ನು ಸಂದಾಯ ಮಾಡಿದಾಗ ಅವರು ಆಪ್ ನ ಪಾಸ್ವರ್ಡ್ನ್ನು ಗ್ರಾಹಕರಿಗೆ ನೀಡುತ್ತಿದ್ದರು ಎಂದು ಹೇಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos