ಐಪೋನ್ ತಯಾರಿಕಾ ಘಟಕ 3,000 ಕೋಟಿ ಕೋಲಾರದಲ್ಲಿ ಹೂಡಿಕೆ

ಐಪೋನ್ ತಯಾರಿಕಾ ಘಟಕ 3,000 ಕೋಟಿ ಕೋಲಾರದಲ್ಲಿ ಹೂಡಿಕೆ

ಕೋಲಾರ, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಐಫೋನ್​​ ವಿನ್ಯಾಸಗೊಳಿಸುವ ಸಂಸ್ಥೆ ವಿಸ್ಟ್ರಾನ್​​ ಕಳೆದ ವರ್ಷವೇ ಕೋಲಾರದ ನರಸುಪುರ ಕೈಗಾರಿಕಾ ಪ್ರದೇಶದಲ್ಲಿ ಐಫೋನ್​ ತಯಾರಿಕಾ ಕೇಂದ್ರ ಸ್ಥಾಪನೆಗಾಗಿ ಮೂರು ಸಾವಿರ ಕೋಟಿ ಹೂಡಿಕೆ ಮಾಡಿದೆ. ಒಂದೆಡೆ ಐಫೋನ್​ಗಳಿಗೆ ವಿಶ್ವದೆಲ್ಲೆಡೆ ಬೇಡಿಕೆ ನಿಧಾನವಾಗಿ ಕುಸಿಯುತ್ತಿರುವ ಬೆನ್ನಲ್ಲೇ ಆ್ಯಪಲ್​ ಸಂಸ್ಥೆ ಭಾರತದಲ್ಲಿ ತನ್ನ ಐಫೋನ್ ತಯಾರಿಕಾ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ. ಭಾರತದಲ್ಲಿ ದೀರ್ಘಕಾಲಿಕ ಸಂಬಂಧವನ್ನು ಬೆಳೆಸುವ ಹಾಗೂ ಪ್ರಾದೇಶಿಕ ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಐಫೋನ್​ 7 ತಯಾರಿಕಾ ಕೇಂದ್ರವನ್ನು ಸ್ಥಾಪಿಸುತ್ತಿರುವುದಾಗಿ ಆ್ಯಪಲ್​ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಐಫೋನ್​​ ವಿನ್ಯಾಸಗೊಳಿಸುವ ಸಂಸ್ಥೆ ವಿಸ್ಟ್ರಾನ್​​ ಕಳೆದ ವರ್ಷವೇ ಕೋಲಾರದ ನರಸುಪುರ ಕೈಗಾರಿಕಾ ಪ್ರದೇಶದಲ್ಲಿ ಐಫೋನ್​ ತಯಾರಿಕಾ ಕೇಂದ್ರ ಸ್ಥಾಪನೆಗಾಗಿ ಮೂರು ಸಾವಿರ ಕೋಟಿ ಹೂಡಿಕೆ ಮಾಡಿದೆ. ನರಸಾಪುರದಲ್ಲಿ ವಿಸ್ಟ್ರಾನ್​ಗಾಗಿ 43 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಈ ಕಂಪನಿಯಲ್ಲಿ ಹತ್ತುಸಾವಿರ ಮಂದಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

450 ಮಿಲಿಯನ್​​ ಸ್ಮಾರ್ಟ್​ಫೋನ್​ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಆ್ಯಪಲ್​​ ಸಂಸ್ಥೆ ಬೆಂಗಳೂರಿನ ಜೊತೆಗೆ ಭಾರತದ ಇನ್ನಿತರ ಪ್ರಮುಖ ನಗರಗಳಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆ ಮುಂದಾಗಿದೆ. ಐಫೋನ್​ 7 ನೀರು ನಿರೋಧಕವಾಗಿದ್ದು 12 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ. ರೆಟಿನಾ ಹೆಚ್​ಡಿ ಡಿಸ್​​ಪ್ಲೇ ಈ ಮೊಬೈಲ್ ಅತ್ಯುತ್ತಮ ಬ್ಯಾಟರಿ ಬಾಳಿಕೆ ಹೊಂದಿದೆ. 32 ಜಿಬಿ ಆಂತರಿಕ ಸಾಮರ್ಥ್ಯ ಹೊಂದಿರುವ ಐಫೋನ್​ 7 ಬೆಲೆ 39,900 ಆಗಿದ್ದರೆ 128 ಆಂತರಿಕ ಸಾಮರ್ಥ್ಯ ಹೊಂದಿದ ಐಫೋನ್ 7 ಬೆಲೆ 49,900 ಆಗಿದೆ. ಐಫೋನ್​ ಬೇಡಿಕೆ ಕುಸಿದ ಪರಿಣಾಮ ಚೀನಾದಲ್ಲಿ ತನ್ನ ಬೆಲೆಯನ್ನು ಇಳಿಕೆ ಮಾಡಿದ್ದು ಭಾರತದಲ್ಲೂ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos