ಉತ್ತರ ಪ್ರದೇಶದಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತ

ಉತ್ತರ ಪ್ರದೇಶದಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತ

ಲಕ್ನೋ, ಡಿ. 27: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ  ಇಂದು ನಮಾಜ ಬಳಿಕ ಮತ್ತೆ ಆರಂಭವಾಗುವ ಹಿನ್ನೆಲೆಯಲ್ಲಿ ಸರಕಾರ ರಾಜ್ಯದಲ್ಲಿ ಕಟ್ಟೆಚ್ಚರ ಘೋಷಿಸಿದ್ದು, 21 ಜಿಲ್ಲೆಗಳಲ್ಲಿ ಅಂತರ್‌ಜಾಲ ಸಂಪರ್ಕವನ್ನು ಕಡಿತಗೊಳಿಸಿದೆ.

ಕಳೆದ ವಾರ ಪೊಲೀಸರು ಹಾಗೂ ಪ್ರತಿಭಟನಾಕಾರರ ಘರ್ಷಣೆಗೆ ಸಾಕ್ಷಿಯಾಗಿದ್ದ ಹೊರತಗಾಗಿಯೂ ರಾಜ್ಯ ರಾಜಧಾನಿ ಲಕ್ನೋದಲ್ಲಿ ಇಂಟರ್‌ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿಲ್ಲ. ಆಗ್ರಾದಲ್ಲಿ  ಬೆಳಗ್ಗೆ 8ರಿಂದ ಸಂಜೆ 6ರ ತನಕ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ಬುಲಂದ್‌ಶಹರ್‌ನಲ್ಲಿ ಶನಿವಾರ ಇಂಟರ್‌ನೆಟ್ ಸೇವೆ ಮತ್ತೆ ಆರಂಭವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಉತ್ತರಪ್ರದೇಶದ ಬಿಜ್ನೋರ್, ಬುಲಂದ್‌ಶಹರ್, ಮುಝಫ್ಫರ್‌ನಗರ, ಮೀರತ್, ಆಗ್ರಾ, ಫಿರೋಝಾಬಾದ್, ಸಂಭಾಲ್, ಅಲಿಗಢ, ಗಾಝಿಯಾಬಾದ್, ರಾಂಪುರ್, ಸೀತಾಪುರ ಹಾಗೂ ಕಾನ್ಪುರ ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos