ಶೋಷಿತರ ಮೀಸಲಾತಿಗೆ ಒತ್ತಾಯ

ಶೋಷಿತರ ಮೀಸಲಾತಿಗೆ ಒತ್ತಾಯ

ಕುಣಿಗಲ್: ರಾಜ್ಯ ಸರ್ಕಾರ ರಾಜ್ಯದ ಪರಿಶಿಷ್ಟ ಜಾತಿಯ ಶೋಷಿತ ಸಮುದಾಯಗಳಿಗೆ ಒಳ ಮೀಸಲಾತಿ ಸೌಲಭ್ಯವನ್ನು ಶೀಘ್ರವಾಗಿ  ಜಾರಿ ಮಾಡುವಂತೆ   ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ವಿ ಶಿವಶಂಕರ್ ಸರ್ಕಾರವನ್ನು ಒತ್ತಾಯಪಡಿಸಿದ್ದಾರೆ.

ತಾಲೂಕು ಕಚೇರಿಯ ಆವರಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟವು ಆಯೋಜಿಸಿದ್ದ ಪ್ರತಿಭಟನೆಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಕಳೆದ ೨೫ ವರ್ಷಗಳಿಂದಲೂ ಪರಿಶಿಷ್ಟ ಜಾತಿ ಜನಾಂಗಗಳಿಗೆ ಶೇಕಡಾ೧೫ ಮೀಸಲಾತಿಯಲ್ಲಿ ಮೀಸಲಾತಿ ವರ್ಗೀಕರಣ ಜಾರಿಗಾಗಿ ನಿತ್ಯ  ನಿರಂತರ ಹೋರಾಟ ನಡೆಯುತ್ತಿದ್ದು ಉಚ್ಚ ನ್ಯಾಯಾಲಯದ ಆದೇಶದಂತೆ ಮೀಸಲಾತಿಯಲ್ಲಿ ಮೀಸಲಾತಿ ವರ್ಗೀಕರಣ ಸಕಾರಾತ್ಮಕವಾಗಿ ಸ್ಪಂದಿಸದ ರಾಜ್ಯ ಸರ್ಕಾರ ಕೂಡಲೇ ಎಲ್ಲಾ ಜಾತಿ  ಬಡವರಿಗೂ ಮೀಸಲಾತಿ ಸೌಲಭ್ಯ ಸಿಗುವಂತಾಗಬೇಕು ಕೂಡಲೇ    ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಕೂಡಲೇ ರಾಜ್ಯ ಸರ್ಕಾರ ಜಾರಿಗೊಳಿಸುವ ಮೂಲಕ ಪರಿಶಿಷ್ಟರಿಗೆ ಶೋಷಿತರಿಗೆ ಒಳ ಮೀಸಲಾತಿಯಿಂದ ಅನುಕೂಲ ಕಲ್ಪಿಸಬೇಕೆಂದು  ಒತ್ತಾಯಿಸಿದರು.

ದಲಿತ ಮುಖಂಡ ಬಿಡಿ ಕುಮಾರ್,  ಹಿರಿಯ ಪತ್ರಕರ್ತ  ರಾಮಚಂದ್ರಯ್ಯ, ಮಾದಿಗ ದಂಡೋರ ಅಧ್ಯಕ್ಷ ನರಸಿಂಹಮೂರ್ತಿ, ದಲಿತ ಹಕ್ಕು ಸಮಿತಿಯ ರಾಜು ವೆಂಕಟಪ್ಪ, ಪುರಸಭಾ ಸದಸ್ಯರಾದ ಶ್ರೀನಿವಾಸ್ ದಲಿತ ನಾರಾಯಣ್, ಪರಮೇಶ್ವರ್ ಯುವಸೈನ್ಯ ರಾಜ್ಯಾಧ್ಯಕ್ಷ  ನಗುತಾ ರಂಗನಾಥ್, ಎಸ್ ಟಿ ರಾಜು, ಎಂ ನರಸಿಂಹ ಪ್ರಸಾದ್,  ನಡೆಮವಿನಪೂರ ರಂಗಸ್ವಾಮಿ, ಹಾಲ್ಕೆರೆ ನಂಜಪ್ಪ, ಸೇರಿದಂತೆ ಅನೇಕ ದಲಿತ ಮುಖಂಡರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos