ಇನ್ಮುಂದೆ ಸಸ್ಯಗಳಿಂದಲೇ ಮೊಟ್ಟೆ, ಮಾಂಸ

ಇನ್ಮುಂದೆ ಸಸ್ಯಗಳಿಂದಲೇ ಮೊಟ್ಟೆ, ಮಾಂಸ

ನವದೆಹಲಿ, ಸೆ. 19 : ಇಷ್ಟು ದಿನ ಮೊಟ್ಟೆ ಮಾಂಸಾಹಾರಿ ಅಥವಾ ಸಸ್ಯಾಹಾರಿ ಎಂಬ ಯಕ್ಷ ಪ್ರಶ್ನೆ ಕಾಡುತ್ತಿತ್ತು. ಈಗ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಟಿಐ) ಸಂಶೋಧಕರು ಶುದ್ಧ ಸಸ್ಯ ಜನ್ಯ ಮೊಟ್ಟೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಐಐಟಿ ಸಂಶೋಧಕರು ಗಿಡದಿಂದಲೇ ಮೊಟ್ಟೆ ತಯಾರಿಸಿದ್ದು, ಈ ಮೊಟ್ಟೆ ಅಂಡರಹಿತ ಹಾಗೂ ಗ್ಲುಟೆನ್ ಮುಕ್ತವಾಗಿದೆ.
ದೆಹಲಿ ಐಐಟಿಯಲ್ಲಿ ಆಯೋಜನೆಗೊಂಡಿದ್ದ ಕೈಗಾರಿಕಾ ದಿನ-2019ರಲ್ಲಿ ಮೊದಲ ಬಾರಿಗೆ ಈ ಮೊಟ್ಟೆ ಪ್ರದರ್ಶನಗೊಂಡಿದೆ. ಆದರೆ ಸಸ್ಯಜನ್ಯ ಮೊಟ್ಟೆಗಳು ಆಕಾರದಲ್ಲಿ ಭಿನ್ನವಾಗಿವೆ. ಕೋಳಿ ಮೊಟ್ಟೆಗಳು ಅಂಡಾಕಾರದಲ್ಲಿದ್ದರೆ, ಸಸ್ಯಜನ್ಯ ಮೊಟ್ಟೆಗಳು ಘನಾಕೃತಿಯಲ್ಲಿ ಇರಲಿವೆ. ನೀರಿನಲ್ಲಿ ಬೆರೆಸಿ ಆಮ್ಲೆಟ್ ಮಾಡಿ ತಿನ್ನಬಹುದು! ಈ ಮೊಟ್ಟೆಗಳಿಗೂ ಕೋಳಿ ಮೊಟ್ಟೆಗಳಿಂದ ತಯಾರಿಸುವ ಆಮ್ಲೆಟ್ನಷ್ಟೇ ವೆಚ್ಚವಾಗಲಿದೆಯಂತೆ!

ಫ್ರೆಶ್ ನ್ಯೂಸ್

Latest Posts

Featured Videos