ಸಲೂನ್ ಮಾಲಿಕನಿಗೆ ಸೋಂಕು

ಸಲೂನ್ ಮಾಲಿಕನಿಗೆ ಸೋಂಕು

ಹೆಬ್ಬೂರು:ಸಲೂನ್ ಅಂಗಡಿ ಮಾಲೀಕನಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಮುತ್ತ ಸೀಲ್ ಡೌನ್ ಮಾಡಿ ಕಂಟೈನ್ಮೆಂಟ್ ಪ್ರದೇಶವನ್ನಾಗಿ ಘೋಷಿಸಲಾಯಿತು. ಪ್ರಾಥಮಿಕ ಸಂಪರ್ಕದಲ್ಲಿದ್ದ ೮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ೨ ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ನಿನ್ನೆಯಷ್ಟೆ ಹೊರಗಡೆಯಿಂದ ಬಂದಿದ್ದ ನಾಲ್ಕು ಮಂದಿಗೆ ಪಾಸಿಟಿವ್ ಬಂದಿದ್ದು, ಇದೀಗ ಮತ್ತೆ ಕೊರೊನ ಸಂಖ್ಯೆ ಹೆಚ್ಚಳವಾಗಿದೆ. ಒಂದು ವಾರದಿಂದ ೮ ಹೊಸ ಪ್ರಕರಣಗಳು ದಾಖಲಾಗಿವೆ. ಗ್ರಾಮದಲ್ಲಿನ ಒಟ್ಟು ೧೪ ಸೋಂಕು ಪ್ರಕರಣಗಳ ದಾಖಲಾಗಿದ್ದು, ಅದರಲ್ಲಿ ೬ ಸಕ್ರಿಯ ಪ್ರಕರಣಗಳಿದ್ದು, ೭ ಮಂದಿ ಗುಣಮುಖರಾಗಿ, ೧ ಸಾವಾಗಿದೆ.  ಈ ಸಂದರ್ಭದಲ್ಲಿ ಗ್ರಾ.ಪಂ. ಪಿಡಿಓ ಜ್ಯೋತಿ, ಲೆಕ್ಕಾಧಿಕಾರಿ ಮಹದೇವಯ್ಯ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಲಕ್ಷ್ಮಿ, ಹಿರಿಯ ಆರೋಗ್ಯ ಸಹಾಯಕರಾದ ಶ್ರೀ ಜವರಯ್ಯ, ಕಿರಿಯ ಸಹಾಯಕಿ ಅಂಜಲಾದೇವಿ, ಪೋಲಿಸ್ ಇಲಾಖೆಯ ಕೀರ್ತಿಪ್ರಸಾದ್.ಎಮ್.ಎಚ್, ಆಶಾ ಕಾರ್ಯಕರ್ತೆ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos