ಇಂದು ತೆರೆ ಮೇಲೆ ನಿಷ್ಕರ್ಷ

ಇಂದು ತೆರೆ ಮೇಲೆ ನಿಷ್ಕರ್ಷ

ಬೆಂಗಳೂರು, ಸೆ. 20 : ಹುಟ್ಟುಹಬ್ಬದ ನೆನಪಿನಲ್ಲಿ 1993ರಲ್ಲಿ ತೆರೆಕಂಡಿದ್ದ ‘ನಿಷ್ಕರ್ಷ’ ಸಿನಿಮಾ ಇಂದು ಮರು ಬಿಡುಗಡೆ ಮಾಡಲಾಗಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ 26 ವರ್ಷಗಳ ಬಳಿಕ ಹೊಸ ರೂಪದೊಂದಿಗೆ ವಿಷ್ಣು ಅಭಿಮಾನಿಗಳಿಗೆ ಮತ್ತೊಮ್ಮೆ ತಮ್ಮ ಮೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಸಿಕ್ಕಂತಾಗಿದೆ.
ವಿಷ್ಣುವರ್ಧನ್, ಅನಂತನಾಗ್, ಬಿ.ಸಿ.ಪಾಟೀಲ್, ಸುಮನ್ ನಗರ್ಕರ್, ರಮೇಶ್ಭಟ್ ಅಭಿನಯಿಸಿದ್ದ ಚಿತ್ರವನ್ನು ಬಿ.ಸಿ.ಪಾಟೀಲ್ ಅವರೆ ಸೃಷ್ಠಿ ಫಿಲಂಸ್ ಮೂಲಕ ನಿರ್ಮಾಣ ಮಾಡಿದ್ದರು. 1993ರಲ್ಲಿ ತೆರೆಕಂಡಿದ್ದ ಈ ಚಿತ್ರ ಶತದಿನೋತ್ಸವ ಆಚರಿಸಿತ್ತು.
ನಿಷ್ಕರ್ಷ ಇದೇ 20ರಂದು ಡಿಜಿಟಲ್ ರೂಪದಲ್ಲಿ ಮರು ಬಿಡುಗಡೆಯಾಗುತ್ತಿದೆ. ಸೆಪ್ಟೆಂಬರ್ 18 ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನವಾಗಿದ್ದು, ಅದೇ ಸಂದರ್ಭದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವುದು ಥ್ರಿಲ್ಲರ್ ಸಿನಿಮಾಗಳು.

ಫ್ರೆಶ್ ನ್ಯೂಸ್

Latest Posts

Featured Videos