ಇಂಡಿಗೋ ಏರ್ಲೈನ್ಸ್ ಸಂಸ್ಥೆ ಭರ್ಜರಿ ಆಫರ್

ಇಂಡಿಗೋ ಏರ್ಲೈನ್ಸ್ ಸಂಸ್ಥೆ ಭರ್ಜರಿ ಆಫರ್

ನವದೆಹಲಿ, ಮಾ.5, ನ್ಯೂಸ್ ಎಕ್ಸ್ ಪ್ರೆಸ್‍: ಇಂಡಿಗೋ ಏರ್ಲೈನ್ಸ್ ಸಂಸ್ಥೆಯ ವತಿಯಿಂದ ಭರ್ಜರಿ ಆಫರ್ ಪ್ರಕಟಿಸಿದೆ.

ಬಣ್ಣಗಳ ಹಬ್ಬ ಹೋಳಿ ಆಚರಣೆ ಮಾಡುವವರಿಗೆ ದೇಶ ಮತ್ತು ವಿದೇಶ ಪ್ರಯಾಣ ಮಾಡಲು ಇಚ್ಛಿಸುವವರಿಗೆ ಅತಿ ಕಡಿಮೆ ದರದ ಅವಕಾಶ ಕಲ್ಪಿಸಿದೆ.

ಮಾ. 5ರಿಂದ 7ರ ವರೆಗೆ ರಾಷ್ಟ್ರದ ಯಾವುದೇ ನಗರಕ್ಕೆಹೊಗಲು ಕೇವಲ 899 ರೂಗಳಲ್ಲಿ ಮಾತ್ರವೆ ವಿಮಾನಯಾನ ಮಾಡಬಹುದಾಗಿದೆ. ಹಾಗೂ ಅಲ್ಲಿನ ವಿಶೇಷ ಸ್ಥಳಗಳ ಸೊಬಗನ್ನು ಕೂಡ ನೋಡಬಹುದು

ವಿದೇಶ ಸುತ್ತುವವರಿಗೆ ಮಾ. 19ರಿಂದ ಸೆ. 28ರವರೆಗೆ ಕೇವಲ 3.399 ರೂಗಳಲ್ಲಿ. ಟಿಕೆಟ್ ದರ ನಿಗದಿ ಮಾಡಿದ್ದು ಪ್ರಯಾಣಿಕರಿಗೆ ಅತ್ಯಂತ ದೊಡ್ಡ ಆಫರ್ ನೀಡಲಾಗಿದೆ ಎಂದು ಇಂಡಿಗೋ ಏರ್ ಲೈನ್ಸ್ ತಿಳಿಸಿದೆ.

ಇಂಡಿಗೋ ಸಂಸ್ಥೆ ಆರಂಭ ಹಂತದ ಬಹುದೊಡ್ಡ ಏರ್ಲೈನ್ಸ್ ಸಂಸ್ಥೆಯಾಗಿದ್ದು ರಾಷ್ಟ್ರೀಯ ಒಟ್ಟು ವಿಮಾನಯಾನದಲ್ಲಿ ಶೇ. 40ರಷ್ಟು ಪ್ರಯಾಣಿಕರ ಪಾಲು ಹೊಂದಿದೆ. ಕಾಮನ ಹಬ್ಬ ಹೋಳಿ ಸಮಯದಲ್ಲಿ ಹಲವಾರು ರಜೆದಿನಗಳಿರುವುದರಿಂದ ಪ್ರಯಾಣಿಕರಿಗೆ ಈ ಭರ್ಜರಿ ಆಫರ್ ನೀಡಲಾಗಿದೆ, ಕಡಿಮೆ ದರದಲ್ಲಿ ಗಗನದ ಹಾರಾಟ ಮಾಡಿ ಕಾಮನ ಹಬ್ಬ ಆಚರಣೆ ಮಾಡಬಹುದಾಗಿದೆ.

ಹೋಳಿ ಹಬ್ಬದ ವಿಶೇಷವಾಗಿ ಏರ್ಲೈನ್ಸ್ ಸಂಸ್ಥೆಯಿಂದ  ಈ ದೊಡ್ಡ ಕೊಡುಗೆ ನೀಡಲಾಗಿದೆ ಎಂದು ಇಂಡಿಗೋ ಏರ್ಲೈನ್ಸ್ ಸಂಸ್ಥೆಯ ಕಮರ್ಷಿಯಲ್ ಹೆಡ್ ವಿಲಿಯಂ ಬಟ್ಲರ್ ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos