ವಿದೇಶಿಗರ ಆರೋಗ್ಯ  ಪ್ರವಾಸೋದ್ಯಮ ಸಿಲಿಕಾನ್ ಸಿಟಿ

ವಿದೇಶಿಗರ ಆರೋಗ್ಯ  ಪ್ರವಾಸೋದ್ಯಮ ಸಿಲಿಕಾನ್ ಸಿಟಿ

ಬೆಂಗಳೂರು, ನ. 29: ರಾಜಧಾನಿಯಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಜನಪ್ರಿಯಗೊಳ್ಳುತ್ತಿದೆ. ಕಳೆದ 3,4 ವರ್ಷಗಳಿಂದ ವಾರ್ಷಿಕ 4೦ ಸಾವಿರಕ್ಕೂ ಹೆಚ್ಚು ವಿದೇಶಿಗರು ಚಿಕಿತ್ಸೆ ಪಡೆದು ಗುಣಮುಖವಾಗಿ ತಮ್ಮ ದೇಶಗಳಿಗೆ ಮರಳುತ್ತಿದ್ದಾರೆ.

ವಾರ್ಷಿಕ ಮಣಿಪಾಲ ಆಸ್ಪತ್ರೆಗೆ 18 ಸಾವಿರ, ನಾರಾಯಣ ಹೃದಯಾಲಯಕ್ಕೆ 12 ಸಾವಿರ, ಫೋರ್ಟಿಸ್‌ಗೆ 2,500 ಅಪೋಲೋ ಒಟ್ಟಾರೆ ರೋಗಿಗಳಲ್ಲಿ ಶೇ.1೦ರಷ್ಟು, ರೈಬೋ ಆಸ್ಪತ್ರೆಗೆ 1,000, ರಾಮಯ್ಯ ಮೆಮೋರಿಯಲ್ ಆಸ್ಪತ್ರೆಗೆ 3೦೦, ನಿಮ್ಹಾನ್ಸ್ ಗೆ 4೦೦, ಜಯದೇವ ಹೃದ್ರೋಗ ಆಸ್ಪತ್ರೆಗೆ ೨೦೦ಕ್ಕೂ ಹೆಚ್ಚು ವಿದೇಶಿಗರು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸಕಲ ಸೌಕರ್ಯ

ಖಾಸಗಿ ಆಸ್ಪತ್ರೆಗಳಿಗೆ ಬರುವ ವಿದೇಶಿಗರಿಗೆ ಆಗಮನದಿಂದ ಹಿಡಿದು ಚಿಕಿತ್ಸೆ ಪಡೆದು ಗುಣಮುಖವಾಗಿ ತೆರಳುವವರೆಗೂ ಎಲ್ಲಾ ರೀತಿಯ ಸೌಲಭ್ಯ ನೀಡುತ್ತಿವೆ. ವಿದೇಶಿ ರೋಗಿ ಸಂಪರ್ಕಿಸಿದರೆ ಮೊದಲು ವೈದ್ಯರೊಂದಿಗೆ ಪ್ರಾಥಮಿಕ ಸಮಾಲೋಚನೆ ನಡೆಲಾಗುತ್ತದೆ. ಬಳಿಕ ವೀಸಾ, ವಿಮಾನ ಟಿಕೆಟ್ ಬುಕ್ಕಿಂಗ್, ಇಲ್ಲಿನ ಓಡಾಟಕ್ಕೆ ವಾಹನ ಸೌಕರ್ಯ, ರೋಗಿಗಳ ಕುಟುಂಬಸ್ಥರಿಗೆ ವಸತಿ ಸೌಕರ್ಯ, ವಿದೇಶಿ ಮಾದರಿ ಊಟ, ಸ್ಥಳೀಯ ಪ್ರವಾಸ, ಅನುಕೂಲಕರ ಸೌಲಭ್ಯ ಒದಗಿಸಲಾಗುತ್ತಿದೆ. ನಗರ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ವಿದೇಶಿಗರಿಗಾಗಿಯೇ ವಿಶೇಷ, ಪ್ರತ್ಯೇಕ ವಿಭಾಗ ಹೊಂದಿವೆ.

ಯಾವ ಚಿಕಿತ್ಸೆಗೆ ಬರುತ್ತಾರೆ?

ಹೃದ್ರೋಗ ಸಮಸ್ಯೆ, ಪ್ಲಾಸ್ಟಿಕ್ ಸರ್ಜರಿ, ಯುರಾಲಜಿ, ನೆಫ್ರಾಲಜಿ, ಜನರಲ್ ಮೆಡಿಸಿನ್, ಆಥೋಪೆಡಿಕ್ಸ್, ಗ್ಯಾಸ್ಟ್ರೋಎಂಟ್ರಾಲಜಿ, ದಂತ ಚಿಕಿತ್ಸೆ, ಇಎನ್‌ಟಿ, ಒಬಿಜಿ, ಆಂಕಾಲಜಿ, ಪೀಡಿಯಾಟ್ರಿಕ್ ಸರ್ಜರಿ ಮುಂತಾದ ವಿಭಾಗದಲ್ಲಿ ವಿದೇಶಿಯರಿಂದ ಚಿಕಿತ್ಸೆಗೆ ಬೇಡಿಕೆ ಇದೆ.

ಸಿಂಗಾಪುರ, ಮಲೇಷ್ಯಾ, ನೂಯಾರ್ಕ್, ಲಂಡನ್‌ಗೆ ಹೋಲಿಸಿದರೆ ಬೆಂಗಳೂರು ದುಬಾರಿಯಲ್ಲ. ಜತೆಗೆ ಉತ್ತಮ ತಂತ್ರಜ್ಞಾನ, ಸಾರ್ವಜನಿಕ ಸೌಲಭ್ಯ, ಬಹುಭಾಷಾ ಪ್ರದೇಶ, ತಣ್ಣಗಿನ ಹವಾಮಾನ ಸೇರಿದಂತೆ ವಿವಿಧ ಅಂಶಗಳು ವಿದೇಶಿಗರನ್ನು ಚಿಕಿತ್ಸೆಗೆ ಬೆಂಗಳೂರಿಗೆ ಬರಮಾಡಿಕೊಳ್ಳುತ್ತಿವೆ. ವಿದೇಶಿ ಆಸ್ಪತ್ರೆಗಳಿಗೆ ಹೋಲಿಸಿದರೆ ಭಾರತದಲ್ಲಿ ವೈದ್ಯಕೀಯ ವೆಚ್ಚ ಕಡಿಮೆ. ದೆಹಲಿ, ಮುಂಬೈ ಹೋಲಿಸಿದರೆ ಬೆಂಗಳೂರು ಅಗ್ಗ ಎನ್ನುತ್ತಾರೆ ಆರೋಗ್ಯ ವಲಯದ ಪರಿಣಿತರು. ನಾರಾಯಣದ ಶೇ.೧೦ರಂದು ರೋಗಿಗಳು

ನಾರಾಯಣ ಹೆಲ್ತ್ ಸಿಟಿ ಸಿಒಒ ಜೋಸೆಫ್ ಪಸಂಘ ಪ್ರಕಾರ, ನಾರಾಯಣ ಹೆಲ್ತ್ ಸಿಟಿ ಒಟ್ಟಾರೆ ರೋಗಗಳಲ್ಲಿ ಶೇ.10ರಷ್ಟು ವಿದೇಶಿಗರೇ ಇದ್ದಾರೆ. ಸರಾಸರಿ ೧೨ ಸಾವಿರಕ್ಕೂ ಅಧಿಕ ವಿದೇಶಿಗರು ಚಿಕಿತ್ಸೆಗೆಂದು ಬರುತ್ತಿದ್ದಾರೆ. ವಿದೇಶಿಗರಿಂದ ಅಂಗಾAಗ ಕಸಿಗೂ ಬೇಡಿಕೆಯಿದೆ. ವಾರ್ಷಿಕ ವಿದೇಶಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಆಯುಷ್ ಚಿಕಿತ್ಸೆಗೂ ಬೇಡಿಕೆ

ನಗರದಲ್ಲಿ ಸರ್ಕಾರಿ 1೦ ಸೇರಿದಂತೆ 2,000 ಹೆಚ್ಚು ಖಾಸಗಿ ಆಯುಷ್ ಚಿಕಿತ್ಸಾಲಯಗಳಿದ್ದು, ವಿದೇಶಿಗರು ಬಂದು ಚಿಕಿತ್ಸೆ ಪಡೆಯುವ ಮೂಲಕ ತಮ್ಮ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ವಿದೇಶಿಗರು ಭಾರತ ಪ್ರವಾಸಕ್ಕೆ ಬರುತ್ತಿರುವುದಕ್ಕೆ ಪ್ರಮುಖ ಕಾರಣ ಆಯುರ್ವೇದ ಚಿಕಿತ್ಸೆ. ಹೊರಭಾಗಗಳಿಂದ ಬಂದವರು ಹೆಚ್ಚಿನದಾಗಿ ಪಂಚಕರ್ಮ ಚಿಕಿತ್ಸೆ ಹಾಗೂ ಪ್ರಕೃತಿ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎನ್ನುತ್ತಾರೆ ಆಯುಷ್ ವೈದ್ಯರು.

 

 

ಫ್ರೆಶ್ ನ್ಯೂಸ್

Latest Posts

Featured Videos