ಭಾರತದ ಉಕ್ಕಿನ ಮಹಿಳೆಯ ಪಾತ್ರಮಾಡುವಾಸೆ: ಕತ್ರೀನಾ ಕೈಫ್

ಭಾರತದ ಉಕ್ಕಿನ ಮಹಿಳೆಯ ಪಾತ್ರಮಾಡುವಾಸೆ: ಕತ್ರೀನಾ ಕೈಫ್

ಮುಬೈ, ಮೇ. 23, ನ್ಯೂಸ್ ಎಕ್ಸ್ ಪ್ರೆಸ್: ಬಾಲಿವುಡ್ ನಟಿ ಕತ್ರೀನಾ ಕೈಫ್ ಸದ್ಯ ಭಾರತ್ ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದರ ನಡುವೆ ಕತ್ರೀನಾ ಕೈಫ್ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಹೌದು, ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುವ ಆಸೆಯನ್ನು ಹೊರಹಾಕಿದ್ದಾರೆ.

ಇಂದಿರಾ ಗಾಂಧಿ ಬಯೋಪಿಕ್ ಬಗ್ಗೆ ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಲೆ ಇತ್ತು. ಆದರೆ, ಈ ಸಿನಿಮಾ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ‘ಭಾರತ್’ ಸಿನಿಮಾದ ಹಾಡುಗಳು ಮತ್ತು ಟ್ರೈಲರ್ ನೋಡಿದ ಅನೇಕರು ಈ ಚಿತ್ರದಲ್ಲಿ ಕತ್ರೀನಾ ಕೈಫ್, ಇಂದಿರ ಗಾಂಧಿಯನ್ನು ಹೋಲುತ್ತಾರೆ. ಹಾಗಾಗಿ ಇಂದಿರಾ ಬಯೋಪಿಕ್ ಗೆ ಕತ್ರೀನಾ ಸೂಕ್ತವಾದ ಆಯ್ಕೆ ಎನ್ನುವ ಮಾತುಗಳು ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ.

ಇದರ ಜೊತೆಗೆ ಕತ್ರೀನಾ ಕೂಡ ಭಾರತದ ಮೊದಲ ಪ್ರಧಾನಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯನ್ನು ಹೊರ ಹಾಕಿದ್ದಾರೆ. ಹಾಗಾಗಿ ಇಂದಿರಾ ಬಯೋಪಿಕ್ ಸೆಟ್ಟೇರಿದರೆ ಮೊದಲ ಆಯ್ಕೆ ಕತ್ರೀನಾ ಆಗಿರುವುದರಲ್ಲಿ ಅನುಮಾನವೆ ಇಲ್ಲ.

ಫ್ರೆಶ್ ನ್ಯೂಸ್

Latest Posts

Featured Videos