ಹಿಂದೂ ಮಹಾಸಾಗರದಲ್ಲಿ ವಿಚಿತ್ರ ಆಕಾರದ ಜೀವರಾಶಿ!

ಹಿಂದೂ ಮಹಾಸಾಗರದಲ್ಲಿ ವಿಚಿತ್ರ ಆಕಾರದ ಜೀವರಾಶಿ!

ಏ. 27, ನ್ಯೂಸ್ ಎಕ್ಸ್ ಪ್ರೆಸ್: ವಿಚಿತ್ರ‌ ಆಕಾರದ ಜೀವರಾಶಿವೊಂದು ಹಿಂದೂ ಮಹಾಸಾಗರದ ಆಳದಲ್ಲಿ ಗೋಚರಿಸಿದೆ. ಜೆಲ್ಲಿ ಮೀನಿನ ಆಕಾರದಲ್ಲಿರುವ ಆ ಜೀವರಾಶಿಯನ್ನ ಸಮುದ್ರದ ಆಳದಲ್ಲಿ ಸಂಚರಿಸುವ ಡೈವರ್ ಸೆರೆಹಿಡಿದಿದೆ. ಸಮುದ್ರದ ಆಳದಲ್ಲಿ ವಿಕ್ಟರ್ ವೆಸ್ಕೊ ಎಂಬ ಡೈವರ್ ಹಿಂದೂ ಮಹಾಸಾಗರದ 7000 ಮೀಟರ್ ಆಳದಲ್ಲಿ ಸಂಚರಿಸಿದ ಜೀವಿಯನ್ನ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ. ಸೆರೆಹಿಡಿಯಲಾದ 25 ಸೆಕೆಂಡ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಮುದ್ರದ ತಳಮಟ್ಟದಲ್ಲಿ ನಿಧಾನವಾಗಿ ಸಂಚರಿಸುವ ಜೀವಿಯು ನೀಲಿ ಬಣ್ಣದಲ್ಲಿರುವುದು ತಿಳಿದುಬರುತ್ತದೆ. ಡಿಸ್ಕವರಿ ಚಾನೆಲ್ ಗೆ ಡಾಕ್ಯುಮೆಂಟರಿ ಚಿತ್ರ ನಿರ್ಮಿಸುವಾಗ ಈ ಜೀವಿ ಕಂಡುಬಂದಿದ್ದು ದ ಫೈವ್ ಡೀಪ್ ಎಕ್ಸಪೆಡಿಷನ್ ತಂಡವು ಸಮುದ್ರದ ಅಗೋಚರ ಪ್ರಪಂಚದಲ್ಲಿರುವ ಬಗ್ಗೆ ಚಿತ್ರೀಕರಿಸಲು ವೆಸ್ಕೊವೋ ಡ್ರೈವ್ ನ್ನ ಸಮುದ್ರದ ಆಳದಲ್ಲಿ ಇಳಿಸಿತ್ತು. ಆಗ ಈ ಜೀವಿ ಕಂಡುಬಂದಿದೆ. ತಂಡದ ಮುಖ್ಯ ವಿಜ್ಞಾನಿ ಅಲನ್ ಜಮಿಸನ್ ಮಾಧ್ಯಮಕ್ಕೆ ಮಾತನಾಡಿ ಸಮುದ್ರದಲ್ಲಿ ಕಾಣಿಸಿಕೊಂಡ ಪ್ರತಿ ಜೀವಿಯನ್ನ ನಾನು ಗುರುತಿಸಬಲ್ಲೆ ಆದರೆ ಈ ರೀತಿಯ ಉಂಡೆ ಆಕಾರದ ವಸ್ತು ಗುರುತಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಸಮುದ್ರದ ಆಳದಲ್ಲಿ ಕಂಡುಬಂದ ಜೀವಿಗೆ ಹೆಸರಿಲ್ಲ. ಏಕೆಂದರೆ ಈ ಜೀವಿಯ ಬಗ್ಗೆ ನಮ್ಮ ತಂಡಕ್ಕೆ ಮಾಹಿತಿ ಇಲ್ಲ. ಇದು ಉದ್ದವಾದ ಗ್ರಹಣಾಂಗಗಳನ್ನ ಹೊಂದಿದ್ದು ಸಂವಾಹನದ ಹಾಗೆ ಕಾಣುತ್ತದೆ ಎಂದು ಅವರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos