ಭಾರತ ಬ್ಯಾಡ್ಮಿಂಟನ್‌ ತಂಡ ಮತ್ತೊಂದು ಇತಿಹಾಸ ಸೃಷ್ಟಿಸಿದೆ!

ಭಾರತ ಬ್ಯಾಡ್ಮಿಂಟನ್‌ ತಂಡ ಮತ್ತೊಂದು ಇತಿಹಾಸ ಸೃಷ್ಟಿಸಿದೆ!

ಬೆಂಗಳೂರು: ಭಾರತ ಬ್ಯಾಡ್ಮಿಂಟನ್‌ ತಂಡ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಮಲೇಷ್ಯಾದ ಸೆಲಂಗೋರ್‌ನಲ್ಲಿ ಭಾನುವಾರ ಮುಕ್ತಾಯ ಕಂಡ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಥಾಯ್ಲೆಂಡ್‌ ತಂಡವನ್ನು 3-2 ರಿಂದ ಮಣಿಸುವ ಮೂಲಕ ಭಾರತ ಮಹಿಳಾ ತಂಡ ಇತಿಹಾಸ ನಿರ್ಮಾಣ ಮಾಡಿದೆ. ಖಂಡಾಂತರ ಟೀಮ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಇದೇ ಮೊದಲ ಭಾರಿಗೆ ಚಾಂಪಿಯನ್‌ ಆಗಿದೆ.

ಪಿವಿ ಸಿಂಧು ನೇತೃತ್ವದ ಭಾರತ ಮಹಿಳಾ ತಂಡ ಎಲ್ಲ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಉತ್ತಮ ಪ್ರದರ್ಶನ ಮುಂದುವರಿಸಿ ಎರಡು ಬಾರಿ ಕಂಚಿನ ಪದಕ ಗೆದ್ದ ಥಾಯ್ಲೆಂಡ್ ತಂಡವನ್ನು ಸೋಲಿಸಿದೆ. ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಮಹಿಳೆಯರಿಗೆ ಇದು ಮೊದಲ ಪ್ರಮುಖ ಪ್ರಶಸ್ತಿಯಾಗಿದೆ. ಈ ಗೆಲುವು ಏಪ್ರಿಲ್ 28 ರಿಂದ ಮೇ 5 ರವರೆಗೆ ಚೀನಾದ ಚೆಂಗ್ಡುದಲ್ಲಿ ನಡೆಯಲಿರುವ ಉಬರ್ ಕಪ್‌ಗೆ ಅವರ ನೈತಿಕ ಮನೋಬಲವನ್ನು ಹೆಚ್ಚಿಸುತ್ತದೆ. ‘ಭಾರತೀಯ ಬ್ಯಾಡ್ಮಿಂಟನ್‌ಗೆ ಇದು ಸ್ಮರಣೀಯ ಕ್ಷಣವಾಗಿದೆ. ಇದರ ಶ್ರೇಯಸ್ಸು ಯುವ ಆಟಗಾರರಿಗೆ ಸಲ್ಲುತ್ತದೆ. ಅವರು ಗೆಲ್ಲುವ ಉತ್ಸಾಹವನ್ನು ತೋರಿಸಿದ್ದು ಪರಸ್ಪರ ಬೆಂಬಲಿಸಿದರು. ಭಾರತದ ಥಾಮಸ್ ಕಪ್ ಗೆಲುವಿನ ವೇಳೆಯ ವಾತಾವರಣವೇ ಇತ್ತು. ಆದ್ದರಿಂದ ಇದು ಭಾರತಕ್ಕೆ ವಿಶೇಷ ಕ್ಷಣವಾಗಿದೆ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos