ಭಾರತ ಏಕದಿನ ಸರಣಿಯ ಮೊದಲ ಪಂದ್ಯ ಗೆಲಲ್ಲು ಇವರೆ ಕಾರಣ

ಭಾರತ ಏಕದಿನ ಸರಣಿಯ ಮೊದಲ ಪಂದ್ಯ ಗೆಲಲ್ಲು ಇವರೆ ಕಾರಣ

ಬೆಂಗಳೂರು: ಇತ್ತೀಚಿಗಷ್ಟೇ ಭಾರತ ಏಷ್ಯಾಕಪ್ ಅನ್ನು ಗೆದ್ದಿದ್ದಾರೆ ಆದರೆ ವಿಶ್ವ ಕಪ್ ಗೂ ಮುನ್ನ ಅಭ್ಯಾಸ ಪಂದ್ಯವನ್ನಾಡಿದ ಭಾರತ ಹಾಗು ಆಸ್ಟ್ರೇಲಿಯಾ ಆಡಿದ್ದಾರೆ ಇದರಲ್ಲಿ ಭಾರತ ತಂಡದ ಹಲವಾರು ಆಟಗಾರರಿಗೆ ವಿಶ್ರಾಂತಿ ನೀಡಿದ್ದು ಹೊಸಬರಿಗೆ ಅವಕಾಶ ನೀಡಲಾಗಿದೆ.
ವಿಶ್ವಕಪ್‌ಗೂ ಮುನ್ನ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಭಾರತದ ಪರ ನಾಲ್ವರು ಸ್ಟಾರ್ ಆಟಗಾರರು ಅರ್ಧಶತಕ ಬಾರಿಸಿದರೆ, ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದರು. ಈ ಐವರು ಆಟಗಾರರು ತಂಡದ ಗೆಲುವಿನ ಹೀರೋಗಳು ಎಂಬುದನ್ನು ಸಾಬೀತುಪಡಿಸಿದರು.
ಇಂದಿನ ಪಂದ್ಯದಲ್ಲಿ ಕೀಪಿಂಗ್ ವಿಷಯದಲ್ಲಿ ಕೆಎಲ್ ರಾಹುಲ್ಗೆ ಇದು ಶುಭ ದಿನವಾಗಿರಲಿಲ್ಲ. ಆದರೆ ಈ ಪಂದ್ಯದಲ್ಲಿ ರಾಹುಲ್ ಅವರ ಬ್ಯಾಟಿಂಗ್ ಸಾಕಷ್ಟು ಪರಿಣಾಮ ಬೀರಿತು. ನಾಯಕನ ಇನಿಂಗ್ಸ್ ಆಡಿದ ಕೆಎಲ್ ರಾಹುಲ್ ಇಶಾನ್ ಮತ್ತು ಸೂರ್ಯ ಜತೆಗೂಡಿ ತಂಡದ ಗೆಲುವನ್ನು ಖಚಿತಪಡಿಸಿದರು. 63 ಎಸೆತಗಳಲ್ಲಿ 58 ರನ್ ಬಾರಿಸಿದ ರಾಹುಲ್ ಸಿಕ್ಸರ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸೂರ್ಯಕುಮಾರ್ ಯಾದವ್ ಸುದೀರ್ಘ ಸಮಯದ ನಂತರ ಏಕದಿನ ಮಾದರಿಯಲ್ಲಿ ಅರ್ಧಶತಕ ಬಾರಿಸಿದರು. ಶುಭ್‌ಮನ್ ಗಿಲ್ ತಮ್ಮ ಅರ್ಧಶತಕದೊಂದಿಗೆ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು. ಇಂದಿನ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್‌ಗೆ ಓಪನಿಂಗ್ ಅವಕಾಶ ಸಿಕ್ಕಿದ್ದು, ಈ ಯುವ ಬ್ಯಾಟರ್ ಅದರ ಸಂಪೂರ್ಣ ಲಾಭ ಪಡೆದಿರು. ನಿಧಾನಗತಿಯ ಆರಂಭದ ನಂತರ ಕೆಲವು ಆಕರ್ಷಕ ಹೊಡೆತಗಳನ್ನು ಬಾರಿಸಿ 71 ರನ್ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು.

ಫ್ರೆಶ್ ನ್ಯೂಸ್

Latest Posts

Featured Videos