ಭರ್ಜರಿ ಗೆಲುವು ಸಾಧಿಸಿದ ಭಾರತ! ಏಕದಿನ ಸರಣಿ ಕೈವಶ

ಭರ್ಜರಿ ಗೆಲುವು ಸಾಧಿಸಿದ ಭಾರತ! ಏಕದಿನ ಸರಣಿ ಕೈವಶ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಎನ್ನುವುದು ಚಿಕ್ಕ ಕ್ರೀಡೆಯಾಗಿ ಉಳಿದಿಲ್ಲ ಒಂದು ದೊಡ್ಡ ಕ್ರೀಡೆಯಾಗಿ ಬೆಳೆದಿದೆ, ಕ್ರಿಕೆಟ್ ಎನ್ನುವುದು ನಮ್ಮ ಎಮೋಷನ್ ಆಗಿದೆ. ಭಾರತ ಏಷ್ಯಾಕಪ್ ಅನ್ನು ಗೆದ್ದಿದ್ದಾರೆ ಆದರೆ ವಿಶ್ವ ಕಪ್ ಗೂ ಮುನ್ನ ಅಭ್ಯಾಸ ಪಂದ್ಯವನ್ನಾಡಿದ ಭಾರತ ಹಾಗು ಆಸ್ಟ್ರೇಲಿಯಾ ನಿನ್ನೆ ಆಡಿದ್ದಾರೆ ಇದರಲ್ಲಿ ಭಾರತ ತಂಡದ ಹಲವಾರು ಆಟಗಾರರಿಗೆ ವಿಶ್ರಾಂತಿ ನೀಡಿದ್ದು ಹೊಸಬರಿಗೆ ಅವಕಾಶ ನೀಡಲಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸಿದೆ. ಬೃಹತ್ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವಾಗದೇ 217 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಆರಂಭಿಕ 2 ಪಂದ್ಯ ಗೆದ್ದ ಭಾರತ ಸರಣಿ ಕೈವಶ ಮಾಡಿಕೊಂಡಿದೆ.
ಆಸ್ಟ್ರೇಲಿಯಾ 9 ಓವರ್‌ಗೆ 2 ವಿಕೆಟ್ ಕಳೆದುಕೊಂಡು 52 ರನ್ ಸಿಡಿಸಿದಾಗ ಮಳೆ ವಕ್ಕರಿಸಿತು. ಹೆಚ್ಚು ಹೊತ್ತು ಮಳೆ ಸುರಿದ ಕಾರಣ ಪಂದ್ಯ ವಿಳಂಬಗೊಂಡಿತು. ಹೀಗಾಗಿ ಡಕ್ ವರ್ತ್ ನಿಯಮ ಅನ್ವಯಿಸಲಾಗಿತ್ತು. ಈ ವೇಳೆ ಆಸ್ಟ್ರೇಲಿಯಾಗೆ 33 ಓವರ್‌ನಲ್ಲಿ 317 ರನ್ ಟಾರ್ಗೆಟ್ ನೀಡಲಾಗಿತ್ತು. ಮಳೆ ಬಳಿಕ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ಲಬುಶೇನ್ ಆಕ್ರಮಣಕಾರಿ ಆಟಕ್ಕೆ ಮುಂದಾದರು.
ಡೇವಿಡ್ ವಾರ್ನರ್ ಅಬ್ಬರ ಆರಂಭಗೊಂಡಿತು. ಇದೇ ವೇಳೆ ಸ್ಟಾರ್ಟರ್ಜಿ ಬದಲಿಸಿದ ಟೀಂ ಇಂಡಿಯಾ ಆರ್ ಅಶ್ವಿನ್ ದಾಳಿ ಆರಂಭಿಸಿತು. ಸ್ಪಿನ್ ಮೋಡಿ ಆರಂಭಗೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾ ಪತನ ಆರಂಭಗೊಂಡಿತು. ಲಬುಶೇನ್ 27 ರನ್ ಸಿಡಿಸಿ ಔಟಾದರು. ಇತ್ತ ಡೇವಿಡ್ ವಾರ್ನರ್ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದರು. 53 ರನ್ ಸಿಡಿಸಿದ ವಾರ್ನರ್ ಕೂಡ ಅಶ್ವಿನ್ ಸ್ಪಿನ್ ದಾಳಿಗೆ ಔಟಾದರು.
ಜೋಶ್ ಇಂಗ್ಲೀಸ್ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಅಲೆಕ್ಸ್ ಕ್ಯಾರಿ 14 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಕ್ಯಾಮರೂನ್ ಗ್ರೀನ್ 19 ರನ್ ಸಿಡಿಸಿ ಔಟಾದರು. ಆ್ಯಡಮ್ ಜಂಪಾ 5 ರನ್ ಗಳಿಸಿ ಔಟಾದರು. ಆದರೆ ಸೀನ್ ಅಬಾಟ್ ಹಾಗೂ ಜೋಶ್ ಹೇಜಲ್‌ವುಡ್ ಅಂತಿಮ ಹಂತದಲ್ಲಿ ಅಬ್ಬರಿಸಿದರು. ಇದರ ನಡುವೆ ಕೆಲ ಕ್ಯಾಚ್ ಕೈಚೆಲ್ಲಿದ ಭಾರತ ಗೆಲುವಿನ ಅಂತರ ತಗ್ಗಿಸಿಕೊಂಡಿತು.
ಸಿಕ್ಸರ್ ಮೂಲಕ ಅಬ್ಬರಿಸಿದ ಸೀನ್ ಅಬಾಟ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಜೋಶ್ ಹೇಜಲ್‌ವುಡ್ 23 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಸೀನ್ ಅಬಾಟ್ 53 ರನ್ ಸಿಡಿಸಿ ಔಟಾದರು. ಇದರೊಂದಿಗೆ ಆಸ್ಟ್ರೇಲಿಯಾ 28.2 ಓವರ್‌ಗಳಲ್ಲಿ 217ರನ್‌ಗೆ ಆಲೌಟ್ ಆಯಿತು. ಭಾರತ 99 ರನ್ ಗೆಲುವು ದಾಖಲಿಸಿತು.

ಫ್ರೆಶ್ ನ್ಯೂಸ್

Latest Posts

Featured Videos