ಇಂಡಿಯಾ ಟುಡೆ ಸಮೀಕ್ಷೆ: ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಸೋಲು-ಗೆಲುವು?

ಇಂಡಿಯಾ ಟುಡೆ ಸಮೀಕ್ಷೆ: ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಸೋಲು-ಗೆಲುವು?

ನವದೆಹಲಿ: ಲೋಕಸಭೆ ಚುನಾವಣೆ 2019 ರ ಬಗ್ಗೆ ಇಂಡಿಯಾ ಟುಡೆಯು ‘ಮೂಡ್‌ ಆಫ್ ದಿ ನೇಶನ್’ ಸಮೀಕ್ಷೆ ನಡೆಸಿದ್ದು, ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸೀಟು ಗಳಿಸುತ್ತದೆ, ಗೆಲುವು ಯಾರಿಗೆ ಎಂದು ಅಂದಾಜಿಸಿದೆ.

ಸಮೀಕ್ಷೆ ಪ್ರಕಾರ 543 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎಗೆ 281 ಸೀಟು ಲಭಿಸಲಿದೆ ಆಮೂಲಕ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ಹಾದಿಗೆ ಹತ್ತಿರದಲ್ಲಿದೆ.

ಕಾಂಗ್ರೆಸ್‌ ನೃತೃತ್ವದ ಯುಪಿಎಗೆ 122 ಸೀಟುಗಳು ಲಭಿಸಲಿದ್ದರೆ, ಕಾಂಗ್ರೆಸ್ ಹೊರತಾದ ಮಹಾಘಟಬಂಧನ್‌ಗೆ 140 ಸೀಟುಗಳು ಲಭಿಸಲಿವೆ. ಸಮೀಕ್ಷೆಯ ಫಲಿತಾಂಶವನ್ನು ಗಮನಿಸುವುದಾದರೆ ಮಹಾಘಟಬಂಧನ್‌ ಮತ್ತು ಕಾಂಗ್ರೆಸ್‌ನ ಸೀಟುಗಳು ಸ್ವಲ್ಪವೇ ಹೆಚ್ಚಾದರೂ ಎನ್‌ಡಿಎಗೆ ಅಧಿಕಾರ ಹಿಡಿಯುವ ಅಧಿಕಾರ ತಪ್ಪುವ ಸಾಧ್ಯತೆ ಇದೆ.

ಮತ ಹಂಚಿಕೆ ಯಾರಿಗೆ ಎಷ್ಟು?

ಸಮೀಕ್ಷೆ ಪ್ರಕಾರ ಎನ್‌ಡಿಎಗೆ 36% ಮತಗಳು ಲಭಿಸಲಿವೆ. ಯುಪಿಎಗೆ 31% ಮತಗಳು ಲಭಿಸಿದರೆ, ಮಹಾಘಟಬಂಧನ್‌ಗೆ 33% ಮತಗಳು ಲಭಿಸಲಿವೆ.

ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿಯ ಜನಪ್ರಿಯತೆಯಲ್ಲಿ ಭಾರಿ ಇಳಿಕೆ ಆಗಿದೆ ಎನ್ನುತ್ತಿದೆ ಮೂಡ್ ಆಫ್ ನೇಶನ್ ಸಮೀಕ್ಷೆ. ಮೋದಿ ಆಡಳಿತದ ಮಧ್ಯಭಾಗದಲ್ಲಿ 42% ಇದ್ದ ಜನಪ್ರಿಯತೆಯು ಈ ಚುನಾವಣೆ ಹೊತ್ತಿಗೆ 30% ಇಳಿದಿದೆ. ಕಳೆದ ಚುನಾವಣೆಯಲ್ಲಿ 20% ರಷ್ಟಿದ್ದ ಕಾಂಗ್ರೆಸ್‌ ಜನಪ್ರಿಯತೆ ಈ ಬಾರಿ ಏರಿಕೆ ಆಗಿದೆ.

ಸಮೀಕ್ಷೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಹಾಘಟಬಂಧನ್‌ ಬಿಜೆಪಿಗೆ ಪೆಟ್ಟು ಕೊಡುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರಗಳಲ್ಲಿ, ಕರ್ನಾಟಕ, ರಾಜಸ್ಥಾನಗಳಲ್ಲಿ ಬಿಜೆಪಿಗೆ ಮಹಾಘಟಬಂಧನ್‌ ಭಾರಿ ಪೆಟ್ಟು ನೀಡಲಿದೆ ಎಂದು ಸಮೀಕ್ಷೆ ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos