ಕಾರ್ಮಿಕ ಕಾನುನೂಗಳ ಬದಲಾವಣೆ

  • In State
  • August 11, 2020
  • 174 Views
ಕಾರ್ಮಿಕ ಕಾನುನೂಗಳ ಬದಲಾವಣೆ

ರಾಮದುರ್ಗ : ಬೃಹತ್ ಕಾರ್ಪೋರೇಟ್ ಉದ್ಯಮಪತಿಗಳ ವಕ್ತಾರನಾಗಿರುವ ಕೇಂದ್ರ ಸರ್ಕಾರವು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣ ಮಾಡಿ ಆ ಮೂಲಕ ದೇಶವೇ ಮಾರಾಟ ಮಾಡಲು ಹೊರಟಿದೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಭಾರತ ರಕ್ಷಿಸಿ ಆಂದೋಲನ ನಡೆಯಿಸಿದ ಪ್ರತಿಭಟನಾಕಾರರು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದೆಂದು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರವು ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳ ಮೂಲಕ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಶಾಸನ ಸಭೆಗಳನ್ನು ಉಪೇಕ್ಷಿಸಿ ಸುಗ್ರಿವಾಜ್ಞೆಗಳ ಮೂಲಕ ಕಾರ್ಮಿಕ ವಿರೋಧಿ, ಕಾರ್ಮಿಕ ಕಾನುನೂಗಳ ಬದಲಾವಣೆ, ರೈತ ವಿರೋಧಿ ಭೂಸಂಬಂಧಿ ಕಾನೂನಗಳ ಬದಲಾವಣೆಯನ್ನು ತರಲು ಹಠತೊಟ್ಟಿದೆ.

ಕರ್ನಾಟಕ ಸರ್ಕಾರವು ಇತ್ತೀಚೆಗೆ ಶೇ. 80 ಕ್ಕೂ ಅಧಿಕ ಉದ್ದಿಮೆಗಳ ಮಾಲೀಕರಿಗೆ ಕೆಲಸಗಾರರನ್ನು ಮನಸೋ ಇಚ್ಚೆ ಬಳಸಿ ಬಿಸಾಡುವ ಸ್ವಾತಂತ್ರ್ಯ ವನ್ನು  ನೀಡುವಂತಹ ತಿದ್ದುಪಡಿಯನ್ನು ಕೈಗಾರಿಕಾ ವಿವಾದ ಕಾಯ್ದೆಯಲ್ಲಿ ತಂದಿದೆ. ಇದರಿಂದ ಕಾರ್ಮಿಕರಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ.ಎಂ. ಜೈನೆಖಾನ್ ಕೇಂದ್ರ ರಾಜ್ಯ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos