ಭಾರತ ಪದಕ ಪಟ್ಟಿಯಲ್ಲಿ 6ನೇ ಸ್ಥಾನ….!

ಭಾರತ ಪದಕ ಪಟ್ಟಿಯಲ್ಲಿ 6ನೇ ಸ್ಥಾನ….!

ಬೆಂಗಳೂರು:  ಭಾರತ ಇತ್ತೀಚಿನ ದಿನಗಳಲ್ಲಿ ಹಲವಾರು ಗೇಮ್ಸ್‌ ಗಳಲ್ಲಿ ಭಾಗವಹಿಸುತ್ತದೆ. ಇದರಿಂದ ಭಾರತಕ್ಕೆ ಪದಕಗಳ ಸುರಿಮಳೆಯೇ ಹರಿದು ಬರುತ್ತಿದೆ. ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕ ಗೆಲುವಿನ ನಾಗಾಲೋಟ ಮುಂದುವರಿದಿದೆ. 4ನೇ ಆವೃತ್ತಿ ಕೂಟದ 3ನೇ ದಿನವಾದ ನಿನ್ನೆ ಭಾರತೀಯರು 6 ಚಿನ್ನ, 8 ಬೆಳ್ಳಿ, 16 ಕಂಚು ಸೇರಿ ಬರೋಬ್ಬರಿ 30 ಪದಕ ಕೊಳ್ಳೆ ಹೊಡೆದಿದ್ದು, ಒಟ್ಟಾರೆ ಪದಕ ಗಳಿಕೆ15 ಚಿನ್ನ ಸೇರಿ 64ಕ್ಕೆ ಏರಿಕೆಯಾಗಿದೆ. ಸದ್ಯ ಭಾರತ ಪದಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಚೀನಾ ಬರೋಬ್ಬರಿ 300 ಪದಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಭಾರತ ಇಂದು ಸಹ  ಪದಕ ಬೇಟೆ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಅಥ್ಲೆಟಿಕ್ಸ್‌ನ ಪುರುಷ, ಮಹಿಳೆಯರ ಡಿಸ್ಕಸ್ ಥ್ರೋ, ಶಾಟ್‌ಪುಟ್‌, ಮಹಿಳೆಯರ ಜಾವೆಲಿನ್‌ ಎಸೆತ, 100 ಮೀ. ಓಟ, ವೇಟ್‌ಲಿಫ್ಟಿಂಗ್‌ ಸೇರಿದಂತೆ ಇನ್ನೂ ಕೆಲ ಕ್ರೀಡೆಗಳಲ್ಲಿ ಪದಕ ಲಭಿಸುವ ಭರವಸೆ ಇದೆ.

 

ಫ್ರೆಶ್ ನ್ಯೂಸ್

Latest Posts

Featured Videos