ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಹೀನಾಯ ಸೋಲು

ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಹೀನಾಯ ಸೋಲು

ಬೆಂಗಳೂರು: ಗೆಲ್ಲ ಬಹುದಾದ ಪಂದ್ಯವನ್ನು ಹೇಗೆ ಸೋಲಬಹುದು ಎಂಬುದನ್ನು ಯಾವುದಾದರು ತಂಡ ಕಲಿಯಬೇಕು ಅಂದರೆ, ಟೀಮ್ ಇಂಡಿಯಾವನ್ನು ನೋಡಿ ಕಲಿಯಬೇಕು. ತವರಿ‌ನ ಕಂಡೀಷನ್, ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ.. ಇಷ್ಟೇ ಏಕೆ ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು ಆರಂಭದಲ್ಲಿ ಕಟ್ಟಿ ಹಾಕಿ 163 ರನ್ ಆಗುವಷ್ಟರಲ್ಲಿ ಐದು ವಿಕೆಟ್ ಪಡೆದು ಮೇಲುಗೈ ಸಾಧಿಸಿತ್ತು.

ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ 246 ರನ್​ಗಳಿಗೆ ಆಲೌಟ್ ಮಾಡಿತು. ಇದಾದ ಬಳಿಕ ಬ್ಯಾಟ್ ಬೀಸಿದ ಭಾರತ ತಂಡ ಮೊದಲ ಇನಿಂಗ್ಸ್​ನಲ್ಲಿ 436 ರನ್ ಕಲೆಹಾಕಿತು.

ಈ ಹಂತದಲ್ಲಿ ಅಟ್ಯಾಕಿಂಗ್ ಬೌಲಿಂಗ್ ನಡೆಸುವಲ್ಲಿ ಎಡವಿದ ಟೀಮ್ ಇಂಡಿಯಾ ಬೌಲರ್ಸ್ ಇಂಗ್ಲೆಂಡ್ ಎರಡನೇ ಇನಿಂಗ್ಸ್ ನಲ್ಲಿ 420 ರನ್ ಕಲೆ ಹಾಕುವಂತಾಯಿತು. ಟೀಮ್ ಇಂಡಿಯಾ 231 ರನ್ ಗುರಿ ಪಡೆಯಿತು. ಆದರೆ ಈ ಗುರಿ ಬೆನ್ನಟ್ಟಲು ವಿಫಲವಾಯಿತು. ಟೀಮ್ ಇಂಡಿಯಾದ ಸೋಲು ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇನ್ನು 190 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 420 ರನ್ ಕಲೆಹಾಕಿ ಟೀಮ್ ಇಂಡಿಯಾ 231 ರನ್​ಗಳ ಸುಲಭ ಗುರಿ ನೀಡಿದ್ದರು. ಆದರೆ ಈ ಗುರಿಯನ್ನು ಬೆನ್ನತ್ತವಲ್ಲಿ ವಿಫಲರಾಗಿರುವ ಭಾರತೀಯರು 28 ರನ್​ಗಳಿಂದ ಸೋಲೊಪ್ಪಿಕೊಂಡಿದ್ದಾರೆ.

ಆದರೆ ಈ ಬಾರಿ ಭಾರತ ತಂಡವನ್ನು ಮಕಾಡೆ ಮಲಗಿಸುವಲ್ಲಿ ಬೆನ್ ಸ್ಟೋಕ್ಸ್​ ಪಡೆ ಯಶಸ್ವಿಯಾಗಿದೆ. ಮೊದಲ ಇನಿಂಗ್ಸ್​ನಲ್ಲಿ 190 ರನ್​ಗಳ ಮುನ್ನಡೆ ಸಾಧಿಸಿದ್ದ ಟೀಮ್ ಇಂಡಿಯಾವನ್ನು 28 ರನ್​ಗಳಿಂದ ಸೋಲಿಸಿ ಇಂಗ್ಲೆಂಡ್ ತಂಡ ಹೊಸ ಇತಿಹಾಸ ಬರೆದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos