ಭಾರತಕ್ಕೆ ಆರಂಭಿಕ ಆಘಾತ

ಭಾರತಕ್ಕೆ ಆರಂಭಿಕ ಆಘಾತ

ಲಂಡನ್ಮೇ. 25, ನ್ಯೂಸ್ಎಕ್ಸ್ ಪ್ರೆಸ್‍: ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಏಕದಿನ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾವು ನ್ಯೂಜಿಲೆಂಡ್ ಸವಾಲನ್ನು ಎದುರಿಸುತ್ತಿದೆ.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ  ಟೀಮ್  ಇಂಡಿಯಾ ದ್ವಿತೀಯ ಓವರ್‌ನಲ್ಲಿ ಆಘಾತವನ್ನು ಎದುರಿಸಿತು. ಐಪಿಎಲ್ ಹೀರೊ ರೋಹಿತ್ ಶರ್ಮಾರನ್ನು ಟ್ರೆಂಟ್ ಬೌಲ್ಟ್ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಕೇವಲ ಆರು ಎಸೆತಗಳನ್ನು ಎದುರಿಸಿದ ರೋಹಿತ್ ಎರಡು ರನ್ ಗಳಿಸಲಷ್ಟೇ ಶಕ್ತವಾದರು.

ಶಿಖರ್ ಧವನ್ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಟ್ರೆಂಟ್ ದಾಳಿಯಲ್ಲೇ ವಿಕೆಟ್ ‌ಕೀಪರ್ ಟಾಪ್ ಬ್ಲಂಡೆಲ್‌ಗೆ ವಿಕೆಟ್ ಒಪ್ಪಿಸಿದರು. ಏಳು ಎಸೆತಗಳನ್ನು ಎದುರಿಸಿದ ಧವನ್ ಎರಡು ರನ್ ಗಳಿಸಿದರು.

ಕರ್ನಾಟಕದ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದರೂ ತಮಗೆ ಲಭಿಸಿದ ಅವಕಾಶವನ್ನು ಕೈಚೆಲ್ಲಿದರು. ಅಲ್ಲದೆ ಬೌಲ್ಟ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದರು. 10 ಎಸೆತಗಳನ್ನು ಎದುರಿಸಿದ ರಾಹುಲ್ ಬೌಂಡರಿಯಿಂದ ಆರು ರನ್ ಗಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos