ಇಂದಿರಾ ಕ್ಯಾಂಟೀನ್ ಊಟ ಆರೋಗ್ಯಕ್ಕೆ ಹಾನಿಕಾರವಂತೆ!

ಇಂದಿರಾ ಕ್ಯಾಂಟೀನ್ ಊಟ ಆರೋಗ್ಯಕ್ಕೆ ಹಾನಿಕಾರವಂತೆ!

ಬೆಂಗಳೂರು, ಮಾ.18, ನ್ಯೂಸ್ ಎಕ್ಸ್ ಪ್ರೆಸ್ : ಇಂದಿರಾ ಕ್ಯಾಂಟೀನ್​ನಲ್ಲಿ ತಯಾರಾಗುವ  ಆಹಾರವನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಭಯಾನಕ ಅಂಶ ಬೆಳಕಿಗೆ ಬಂದಿದೆ. ಜಯನಗರ, ಜೆಪಿ ನಗರ ಹಾಗೂ ನಾಗಾಪುರ ವಾರ್ಡ್​ಗಳಲ್ಲಿ ಊಟದ ಸ್ಯಾಂಪಲ್​​​ಅ​​ನ್ನು ಪರೀಕ್ಷಿಸಲಾಗಿದೆ. ರಾಜ್ಯ ಸರ್ಕಾರದ ಮಹತ್ವಾಂಕ್ಷೆಯ ಇಂದಿರಾ ಕ್ಯಾಂಟೀನ್ ಉತ್ತಮ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ, ಈಗ ಆ ಕ್ಯಾಂಟೀನ್​ ಊಟ ಸೇವಿಸಿದರೆ ಪ್ರಾಣಕ್ಕೆ ಸಂಚಕಾರ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಇಂದಿರಾ ಕ್ಯಾಂಟೀನ್​ನಲ್ಲಿ ತಯಾರಾಗುವ  ಆಹಾರವನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಭಯಾನಕ ಅಂಶ ಬೆಳಕಿಗೆ ಬಂದಿದೆ. ಜಯನಗರ, ಜೆಪಿ ನಗರ ಹಾಗೂ ನಾಗಾಪುರ ವಾರ್ಡ್​ಗಳಲ್ಲಿ ಊಟದ ಸ್ಯಾಂಪಲ್​​​ಅ​​ನ್ನು ಪರೀಕ್ಷಿಸಲಾಗಿದೆ. ಅದರಂತೆ ಸ್ಯಾಂಪಲ್ಅನ್ನು ಪರೀಕ್ಷಿಸಿ ರಾಮಯ್ಯ ಆಸ್ಪತ್ರೆಯ ವೈದ್ಯರು, ಈ ಊಟದಲ್ಲಿ ಅತಿಯಾದ ಪ್ರಮಾಣದಲ್ಲಿ ಕ್ರಿಮಿ-ಕೀಟಗಳು ಇರುವುದಾಗಿ ವರದಿ ನೀಡಿದ್ದಾರೆ. ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 16 ಸಾವಿರ ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್​​​​ನಿಂದ ಊಟ  ಕೊಡಲಾಗುತ್ತಿದೆ. ರಾತ್ರಿ ಉಳಿದ ಊಟವನ್ನು ಬೆಳಗ್ಗೆ ಪೌರ ಕಾರ್ಮಿಕರಿಗೆ ನೀಡಲಾಗುತ್ತಿದೆ. ಸ್ವಚ್ಚತೆ ಇಲ್ಲದೆ ಆಹಾರವನ್ನು ಗುತ್ತಿಗೆದಾರರು ಪೂರೈಕೆ ಮಾಡುತ್ತಿದ್ದಾರೆ.

ವೈದ್ಯ ಡಾ.ಶಿವಪ್ರಕಾಶ್ ಎಂಬುವವರು ಟೆಸ್ಟ್ ರಿಪೋರ್ಟ್​​ ನೀಡಿದ್ದು. ಈ ಊಟ ಸೇವಿಸಲು  ಯೋಗ್ಯವಲ್ಲ. ಅತಿ ಹೆಚ್ಚು ಕ್ರಿಮಿ ಕೀಟಗಳು ಇದರಲ್ಲಿದೆ. ಮುಂಜಾಗ್ರತಾ ಕ್ರಮ ವಹಿಸದಿದ್ರೆ ಪ್ರಾಣಕ್ಕೆ ಸಂಚಕಾರ ಬರಲಿದೆಯಂತೆ!

ಫ್ರೆಶ್ ನ್ಯೂಸ್

Latest Posts

Featured Videos