ಅನರ್ಹರಲ್ಲಿ ಹೆಚ್ಚಿದ ಆತಂಕ

ಅನರ್ಹರಲ್ಲಿ ಹೆಚ್ಚಿದ ಆತಂಕ

ನವದೆಹಲಿ, . 8 :  ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನಗೊಂಡಿದ್ದ 17 ಶಾಸಕರು ಸ್ಥಾನಕ್ಕೆ ಉಪಚುನಾವಣೆ ನಡೆಯಲು ಇನ್ನು ಕೆಲವೇ ದಿನಗಳು ಬಾಕಿ ಇರುವ ನ್ಯಾಯಾಲಯ ಅಂತಿಮ ತೀರ್ಪು ನೀಡಲು ದಿನಾಂಕವನ್ನು ನಿಗದಿಪಡಿಸದಿರುವುದು ಅನರ್ಹರಲ್ಲಿ ಆತಂಕವನ್ನು ಸೃಷ್ಟಿಸಿದೆ.ರಾಜ್ಯದ 15 ಕ್ಷೇತ್ರಗಳಿಗೆ ಡಿ.5ರಂದು ನಡೆಯಲಿರುವ ಉಪಚುನಾವಣೆ ಮುಂದೂಡುವಂತೆ ಅನರ್ಹರ ಶಾಸಕರು ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್  ತಳ್ಳಿಹಾಕಿದೆ. ನ್ಯಾಯಾಲಯದ  ನಿರ್ಧಾರದಿಂದ ಅನರ್ಹ ಶಾಸಕರಿಗೆ ಮತ್ತೆ ಮೇಲಿಂದ ಮೇಲೆ ನಿರಾಸೆಯ ಕಾರ್ಮೋಡ ಆವರಿಸುತ್ತಿದೆ.  ಸೋಮವಾರದಿಂದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಆಯೋಗಕ್ಕೆ ಚುನಾವಣೆಯನ್ನು ಮುಂದೂಡುವಂತೆ ನಿರ್ದೇಶನ ನೀಡಬೇಕೆಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಮನವಿ ಮಾಡಿದರು.

 ಅನರ್ಹ ಶಾಸಕರು ಅತಂತ್ರ : ಡಿಸೆಂಬರ್ 5ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಸಮರ ನಡೆಯಲಿದ್ದು, ಸೋಮವಾರದಿಂದ ಅಧಿಸೂಚನೆ ಹೊರಡಲಿದೆ. ಒಂದು ವೇಳೆ ನ್ಯಾಯಾಲಯ ನಾಮಪತ್ರ ಸಲ್ಲಿಸಲು ಕೊನೆಯ ದಿನದೊಳಗೆ ತೀರ್ಪು ನೀಡದಿದ್ದರೆ ಅನರ್ಹ ಶಾಸಕರು ಇನ್ನಷ್ಟು ಅತಂತ್ರರಾಗಲಿದ್ದಾರೆ.  ಮಸ್ಕಿ, ಆರ್‍ ಆರ್‍ನಗರ ವಿಧಾನಸಭಾ ಕ್ಷೇತ್ರಗಳ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾರಣ ಉಪಚುನಾವಣೆ ದಿನಾಂಕವನ್ನು ಪ್ರಕಟಿಸಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos