ಸರ್ಕಾರಿ ನೌಕರಿ ನೆಚ್ಚಿಕೊಂಡರೆ ನಿರುದ್ಯೋಗ ಹೆಚ್ಚಳ

ಸರ್ಕಾರಿ ನೌಕರಿ ನೆಚ್ಚಿಕೊಂಡರೆ ನಿರುದ್ಯೋಗ ಹೆಚ್ಚಳ

ಚಂದಾಪುರ, ಸೆ. 28: ಯುವಕರು ಸರ್ಕಾರಿ ಉದ್ಯೋಗ ಒಂದೇ ನಂಬಿಕೊಂಡು ಕೂತರೆ ನಿರುದ್ಯೋಗವು ಹೆಚ್ಚಾಗುತ್ತದೆ ಎಂದು ಆನೇಕಲ್ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ನೀಲಕಂಠಯ್ಯ ತಿಳಿಸಿದರು.

ಚಂದಾಪುರ ವೃತ್ತದಲ್ಲಿ ಎಲೆಕ್ಟ್ರಾನಿಕ್ ಸಿಟಿಯ ರೂಮ್ಯಾನ್ ಟೆಕ್ನಾಲಜಿ ಸಂಸ್ಥೆಯ ವತಿಯಿಂದ ಚಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಕೌಶಲ ಯೋಜನಾ ತರಬೇತಿ ನೋಂದಣಿ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕೌಶಲ ಯೋಜನೆಯನ್ನು ಜಾರಿಗೆ ತಂದಿದ್ದು ಖಾಸಗಿ ವಲಯದಲ್ಲಿ ಹಾಗೂ ಸ್ವಯಂ ಉದ್ಯೋಗ ವಯಲದಲ್ಲಿ ಉದ್ಯೋಗವನ್ನು ಮಾಡುವಂತಹ ಶಕ್ತಿಯನ್ನು ಯುವಕರಲ್ಲಿ ತುಂಬುವ ಕೆಲಸಕ್ಕೆ ಮುಂದಾಗಿದೆ. ಆ ಮೂಲಕ ದೇಶದ ಕೋಟ್ಯಂತರ ಜನರಿಗೆ ವಿವಿಧ ಸ್ವಯಂ ಉದ್ಯೋಗದ ತರಬೇತಿ ದೊರೆತು ಸ್ವಾಬಲಂಬಿಗಳಾಗುವ ಅವಕಾಶ ಹೆಚ್ಚಾಗಿದೆ ಎಂದು ತಿಳಿಸಿದರು.

ಚಂದಾಪುರ ಪುರಸಭೆಯ ಸದಸ್ಯೆ

ಜಾನಕಮ್ಮ ವೆಂಕಟೇಶ್ ಮಾತನಾಡಿ, ಇಂದಿನ ಜಾಗತೀಕರಣ ಮತ್ತು ಔದ್ಯೋಗಿಕ ಬೆಳೆವಣಿಗೆಯಿಂದಾಗಿ ಸರ್ಕಾರವು ಯುವ ಶಕ್ತಿಗೆ ಉದ್ಯೋಗವನ್ನು ದೊರೆಕಿಸಿಕೊಡಲು ಆನೇಕ ವಿಧದಲ್ಲಿ ಶ್ರಮಿಸುತ್ತಿದೆ. ನಮ್ಮ ವೈಜ್ಞಾನಿಕ ಕ್ಷೇತ್ರದಲ್ಲಿ ಹಾಗೂ ಆಧುನಿಕ ತಂತ್ರಜ್ಞಾನದಲ್ಲಿ ಹೆಚ್ಚು ಹೆಚ್ಚು ಉದ್ಯೋಗವನ್ನು ಸೃಷ್ಠಿಸುತ್ತಿದೆ. ಆದ್ದರಿಂದ ಇಂದಿನ ದಿನಗಳಲ್ಲಿ ಯುವಕರಿಗೆ ಕಂಪ್ಯೂಟರ್ ತರಬೇತಿಯನ್ನು ಉಚಿತವಾಗಿ ಪಡೆದುಕೊಂಡು ಉದ್ಯೋಗ ಮಾಡಿ ತಮ್ಮ ಆರ್ಥಿಕತೆಯನ್ನು ಸುಧಾರಿಸಿಕೊಂಡು ಜೀವನದಲ್ಲಿ ಮುಂದೆ ಬರುವ ಅವಕಾಶಗಳು ಹೆಚ್ಚಾಗಿವೆ ಎಂದರು.

ರೂಮ್ಯಾನ್ ಟೆಕ್ನಾಲಜಿ ಸಂಸ್ಥೆಯ ಸಂಯೋಜಕ ನರಸಿಂಹ ಮೂರ್ತಿ ಮಾತನಾಡಿ, ವಿವಿಧ ವಾರ್ಡ್ಗಳಲ್ಲಿ 150ಕ್ಕೂ ಹೆಚ್ಚು ಯುವಕರು ಮತ್ತು ಯುವತಿಯರು ಇಂದು ಈ ಶಿಬಿರಕ್ಕೆ ಆಗಮಿಸಿ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಕಂಪ್ಯೂಟರ್ ಹಾರ್ಡ್ವೇರ್ ಸಾಫ್ಟ್ವೇರ್ ಮತ್ತಿತರ ತರಬೇತಿಯನ್ನು ನೀಡಲಾಗುತ್ತಿದ್ದು, ಯೋಜನೆಯ ಪ್ರಯೋಜನವನ್ನು ಯುವಜನತೆಗೆ ತಲುಪಿಸಲು ರೂಮ್ಯಾನ್ ಟೆಕ್ನಾಲಜಿ ಸಂಸ್ಥೆಯು ಶ್ರಮಿಸುತ್ತಿದೆ ಎಂದು ಹೇಳಿದರು.

ಚಂದಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷ ಸುಧಾಕರ್ ರೆಡ್ಡಿ, ಸಮಾಜ ಸೇವಕ ಬಿ.ಎಸ್.ನೀಲಕಂಠಯ್ಯ ಇನ್ನೂ ಮುಂತಾದವರು ಹಾಜರಿದ್ದರು.

 

 

 

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos