ಹೊಸ ಮಿನಿ ವಿಧಾನಸೌಧ ಉದ್ಘಾಟನೆ

ಹೊಸ ಮಿನಿ ವಿಧಾನಸೌಧ ಉದ್ಘಾಟನೆ

ಶಿರಾ: ತಾಲ್ಲೂಕು ಆಡಳಿತ ಕೇಂದ್ರವಾಗಿರುವ ತಾಲ್ಲೂಕು ಕಛೇರಿ ಹಳೆ ಕಟ್ಟಡ ಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲವಾಗಿರುವ ಕಾರಣ ಕಛೇರಿ ಕೆಲಸಗಳಿಗೆ ಯೋಗ್ಯವಿಲ್ಲದೇ ಇರುವ ಕಾರಣ, ಹೊಸ ಕಛೇರಿ ಉದ್ಘಾಟನೆ ಅನಿವಾರ್ಯವಾಗಿತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಇಲ್ಲಿನ ರಾ.ಹೆ.೪೮ರ ಬೈಪಾಸ್ ಬಳಿ ಮಿನಿ ವಿಧಾನಸೌಧ ಕಛೇರಿ ಉದ್ಘಾಟಿಸಿ ಮಾತನಾಡಿ ವಯೋ ವೃದ್ಧರೇ ಮೊದಲಾಗಿ ಪಿಂಚಣಿ ಯೋಜನೆಗೆ ಸರ್ಕಾರ ನೂತನ ಮಾದರಿಯನ್ನು ರೂಪಿಸಿದ್ದು, ಹೊಸ ಮಂಜೂರಾತಿ, ಆಧಾರ್ ಕಾರ್ಡ್ ನೊಂದಣಿಯಂತೆ ಸ್ವಯಂ ಚಾಲಿತವಾಗಿ ಜಾರಿಗೊಳ್ಳಲಿದೆ. ಜತೆಗೆ ಪಿಂಚಣಿ ವಿತರಣೆಯನ್ನು ಅಂಚೆ ಇಲಾಖೆಯಿಂದ ತೆರೆವುಗೊಳಿಸಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ನಡುವಿನ ಗೊಂದಲ ಬಗೆಹರಿಸಿ ರೈತರು ಸಾಗುವಳಿ ಮಾಡುತ್ತಿರುವ ಮತ್ತು ಮನೆ ಕಟ್ಟಿಕೊಂಡಿರುವ ಭೂಮಿಗಳನ್ನು ಸಕ್ರಮಗೊಳಿಸಲು ಎರಡೂ ಇಲಾಖೆಗಳ ಸಚಿವರು ಒಪ್ಪಿಗೆ ನೀಡಿದ್ದಾರೆ. ಕಂದಾಯ ಇಲಾಖೆಯವರ ಮನವಿ ಮೇರೆಗೆ ಕಂದಾಯ ಸಚಿವರ ಒಪ್ಪಿಗೆ ಪಡೆದೇ ಕಛೇರಿ ಉದ್ಘಾಟಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos