ಕಲ್ಯಾಣಿ ಬಯೋಲ್ಯಾಬ್ ಉದ್ಘಾಟನೆ

  • In State
  • August 14, 2020
  • 171 Views
ಕಲ್ಯಾಣಿ ಬಯೋಲ್ಯಾಬ್ ಉದ್ಘಾಟನೆ

ತುಮಕೂರು:ಕೋವಿಡ್-೧೯ ಸೇರಿದಂತೆ ಎಲ್ಲಾ ರೀತಿಯ ಸೂಕ್ಷ್ಮಣಾ ಜೀವಿಗಳಿಂದ ಬರುವ ರೋಗಗಳನ್ನು ಪತ್ತೆ ಹಚ್ಚುವ ಕಲ್ಯಾಣಿ ಮಾಲಿಕ್ಯುಲರ್ ಬಯೋ ಲ್ಯಾಬ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಿದರು.

ಕಲ್ಯಾಣಿ ಬಯೋಟೆಕ್ ಅಡಿಯಲ್ಲಿ ನಗರದ ಶ್ರೀಶಿವಕುಮಾರಸ್ವಾಮೀಜಿ ವೃತ್ತದಲ್ಲಿ ಆರಂಭವಾಗಿರುವ ಈ ಮಾಲಿಕ್ಯುಲರ್ ಬಯೋ ಲ್ಯಾಬ್ ರಾಷ್ಟ್ರೀಯ ಮಾನ್ಯತೆ ಪಡೆದ ಬಯೋಲ್ಯಾಬ್(ಎನ್.ಎ.ಬಿ.ಎಲ್.)ನಿಂದ ಮಾನ್ಯತೆ ಪಡೆದ ಲ್ಯಾಬ್ ಆಗಿದ್ದು, ಎಲ್ಲಾ ರೀತಿಯ ಸೂಕ್ಷ್ಮಣಾ ಜೀವಿಗಳಿಂದ ಬರಬಹುದಾದ ವೈರಸ್ ರೋಗಗಳನ್ನು ಪತ್ತೆ ಹಚ್ಚಬಹುದಾದ ಎಲ್ಲಾ ರೀತಿಯ ಎಕ್ಯೂಪ್‌ಮೆಂಟ್ ಹೊಂದಿರುವ ಸೂಕ್ಷ್ಮಣಾ ಜೀವಶಾಸ್ತç ಪ್ರಯೋಗಾಲಯ ಇದಾಗಿದೆ.

ಕಲ್ಯಾಣಿ ಬಯೋಟೆಕ್ ಮಾಲಿಕ್ಯುಲರ್ ಲ್ಯಾಬ್ ಉದ್ಘಾಟಿಸಿ, ಶುಭಕೋರಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಖಾಸಗಿ ವಲಯದಲ್ಲಿ ಇಂತಹದ್ದೊಂದು ಪ್ರಯೋಗಾಲಯದ ಅಗತ್ಯವಿತ್ತು. ಅದು ಇಂದು ಪರ‍್ಣಗೊಂಡಂತಾಗಿದೆ.ಎಲ್ಲಾ ರೀತಿಯ ಟೆಸ್ಟ್ ಒಂದೇ ಸೂರಿನಡಿ ದೊರೆಯುತ್ತಿರುವುದು ಒಳ್ಳೆಯ ಬೆಳವಣಿಗೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಕಲ್ಯಾಣಿ ಬಯೋಟೆಕ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬೆಳ್ಳಿ ಲೋಕೇಶ್ ಮಾತನಾಡಿ, ಹಲವು ಸಮಾನ ಮನಸ್ಕ ಗೆಳೆಯರು ಒಗ್ಗೂಡಿ,ಎನ್.ಬಿ.ಎ.ಎಲ್ ನ ಅನುಮತಿಯೊಂದಿಗೆ ಮಾಲಿಕ್ಯುಲರ್ ಲ್ಯಾಬ್ ಸ್ಥಾಪಿಸಲಾಗಿದೆ. ಹಲವರು ಇಂತಹ ಅತ್ಯಾಧುನಿಕ ಲ್ಯಾಬ್ ತೆರೆಯಲು ನಮಗೆ ಸಹಕಾರ ನೀಡಿದ್ದು,ಅವರುಗಳಿಗೆ ಹಾಗೂ ಉತ್ತಮ ಗುಣಮಟ್ಟದ ಪ್ರಯೋಗಾಲಯ ಉಪಕರಣಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಜನತೆ ಯಾವುದೇ ಭಯವಿಲ್ಲದೆ ಕೋವಿಡ್-೧೯ ಸೇರಿದಂತೆ ಎಲ್ಲಾ ರೀತಿಯ ಸೂಕ್ಷ್ಮಣು ರೋಗಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದರು.

 

 

 

 

ಫ್ರೆಶ್ ನ್ಯೂಸ್

Latest Posts

Featured Videos