ಹಿರಿಯೂರಿನಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ

ಹಿರಿಯೂರಿನಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ

ಚಿತ್ರದುರ್ಗ, ಅ. 5: ಜಿಲ್ಲೆಯ ಹಿರಿಯೂರು ನಗರದ ಬಡವರ ಪಾಲಿಗೆ ಹಸಿವು ನಿಗಿಸುವ ಮಹತ್ತರ ಯೋಜನೆಯಾದ ಇಂದಿರಾ ಕ್ಯಾಂಟಿನನ್ನು ಸಚಿವ ಶ್ರೀರಾಮುಲು ಉದ್ಘಾಟಿಸಿದರು.

ನಗರದ ಖಾಸಗಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಈ ಕ್ಯಾಂಟಿನ್ ಬಡವರಿಗೆ, ವಿದ್ಯಾರ್ಥಿಗಳಿಗೆ, ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗಲಿದ್ದು, ಸುಚಿತ್ವ, ಸ್ವಚ್ಚತೆ ಕಾಪಡಬೇಕು ಎಂದರು. ಇಂದಿರಾ ಕ್ಯಾಂಟಿನ್ ನಲ್ಲಿ ಗುಣಮಟ್ಟದ ಊಟ, ಉಪಹಾರ ಕೋಡುವಂತೆ ಸಂಭಂದಪಟ್ಟ ಗುತ್ತಿಗೆದಾರರಿಗೆ ತಿಳಿಸಿದರು. ಒಂದು ವೇಳೆ ಇಂದಿರಾ ಕ್ಯಾಂಟಿನ್ ನಲ್ಲಿ ಸರಿಯಾಗಿ ನಡೆಯದಿದ್ದರೆ ಗುತ್ತಿಗೆಯನ್ನು ರದ್ದು ಪಡಿಸಲಾಗುವುದು ಎಂದು ಹೇಳಿದರು. ಹಿರಿಯುರು ಇಂದಿರಾ ಕ್ಯಾಂಟಿನ್ ನನೆಗುದಿಗೆ ಬಿದ್ದಿದ್ದ ಯೋಜನೆಯನ್ನು ನಗರಸಭೆ ಆಯುಕ್ತರಾದ ಹೆಚ್. ಮಹಾಂತೇಶ್  ಕೈಗೆತ್ತಿಕೊಂಡು ಕಾಮಗಾರಿ ಮುಗಿಸಿ ಇಂದು ಉದ್ಘಾಟನಾ ಭಾಗ್ಯಕ್ಕೆ ಸಾಕ್ಷಿಯಾದರು.

ನಂತರ ಮಾತನಾಡಿದ ಶಾಸಕಿ ಕೆ. ಪೂರ್ಣಿಮಾ ಹಿರಿಯೂರಿನ ಜನತೆಯ ಬಹುದಿನಗಳ ಬೇಡಿಕೆ ಇಂದು ನನಸಾಗಿದೆ. ಪ್ರತಿಯೊಬ್ಬರು ಇಂದಿರಾ ಕ್ಯಾಂಟಿನ್ ಯೋಜನೆ ಉಪಯೋಗಿಸಿಕೊಂಡು ಹ

ಸಿವನ್ನ ನಿಗಿಸಿಕೊಳ್ಳಬಹುದು ಎಂದರು.

ಇನ್ನು ಭದ್ರಾ ಮೇಲ್ದಂಡೆ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಿ ಶಾಸಕಿ ಕೆ. ಪೂರ್ಣಿಮಾ ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ಮೂಲಕ, ಅಜ್ಜಂಪುರ ಮಾರ್ಗವಾಗಿ ಭದ್ರಾ ನೀರನ್ನು ಹಿರಿಯೂರು ವಿವಿ ಸಾಗರಕ್ಕೆ ನೀರು ಹರಿಸುವ ಯೋಜನೆ ನಿನ್ನೆ ಪ್ರಯೋಗಿಕವಾಗಿ ಆರಂಭವಾಗಿದ್ದು, ಇನ್ನೇರು ದಿನಗಳಲ್ಲಿ ಭದ್ರೆ ವಿವಿ ಸಾಗರ ಸೇರಲಿದ್ದಾಳೆ. ನನ್ನ ಕ್ಷೇತ್ರದ ರೈತರ ಬಹು ಮುಖ್ಯ ಕನಸು ಈಗ ಈಡೆರಿಸುವ ಕಾಲ ಹತ್ತಿರವಾಗಿದೆ ರೈತರಲ್ಲಿ ನಗುವಿನ ವಾತಾವರಣ ಸೃಷ್ಠಿಯಾಗಿದೆ.

ನಾನು ಮೊದಲ ಬಾರಿಗೆ ಶಾಸಕಳಾದ ಮೇಲೆ  ವಿಧಾನ ಸಭೆಯ ಅಧಿವೇಶನದಲ್ಲಿ ಚರ್ಚೆ ಮಾಡಿ ಗಮನ ಸೆಳೆದಿದ್ದು, ಕಾಮಗಾರಿ ಸ್ಥಳವನ್ನು 3 ಬಾರಿ ಪರೀಶಿಲನೆ ಮಾಡಿ ಸಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿ ಮುಗಿಸುವಂತೆ ಒತ್ತಡ ಹಾಕಿದ್ದು, ಈಗ ಕೆಲಸ ಮುಗಿದಿದೆ ಎಂದು ಹೇಳಿದರು. ಒಂದು ಸಂತೋಷದ ವಿಷಯ ಎಂದರೆ ಈ ಯೋಜನೆಗೆ ಮೊದಲು ಅನುದಾನ ಕೊಟ್ಟವರು ಸಿಎಂ, ಬಿಎಸ್.ವೈ ನವರು ಈಗ ಅದೇ  ಸಿಎಂ. ಯಡಿಯೂರಪ್ಪ ನವರು ಅತಿ ಶಿಘ್ರದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಶಾಸಕಿ ಕೆ. ಪೂರ್ಣಿಮಾ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos