ಪೊಲೀಸ್ ಠಾಣೆಯಲ್ಲಿ ಮಕ್ಕಳಿಗಾಗಿ ಪ್ಲೆ ಸ್ಕೂಲ್

ಪೊಲೀಸ್ ಠಾಣೆಯಲ್ಲಿ ಮಕ್ಕಳಿಗಾಗಿ ಪ್ಲೆ ಸ್ಕೂಲ್

ಬೆಂಗಲುರು, ಸೆ. 14: ಪೊಲೀಸರನ್ನು ಕಂಡರೆ ಜನರು ಭಯಪಡುವುದು  ನಮಗೆಲ್ಲ ತಿಳಿದಿರುವ ಸಂಗತಿ. ಆದರೆ, ಅದೆ ಪೊಲೀಸರು ಜನರಲ್ಲಿ ಮಕ್ಕಳಲ್ಲಿ ಭಯದ ವಾತವರಣ ಹೋಗಲಾಡಿಸಲು ಜನ ಸ್ನೇಹಿಯಾಗಿ ವರ್ತಿಸುತ್ತಿದ್ದಾರೆ.

ಅದಕ್ಕೆ ಉದಾ:  ಇಂದು ಹೆಚ್ ಎಸ್ ಆರ್ ನ  ಪೊಲೀಸ್ ಠಾಣೆಯಲ್ಲಿ ಮಕ್ಕಳ ಮನೆಯನ್ನು ಉಧ್ಘಾಟನೆ ಮಾಡಲಾಯಿತು. ತಂದೆ ತಾಯಿಯರು ದೂರನ್ನು ನೀಡಲು ಪೊಲೀಸ್ ಠಾಣೆಗೆ ಬರುವ ಸಂಧರ್ಭದಲ್ಲಿ ತಮ್ಮೊಂದಿಗೆ ಮಕ್ಕಳನ್ನು ಕರೆತರಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಪೋಲಿಸರು ಮತ್ತು ಪೊಲೀಸ್ ಠಾಣೆಯ ಮೇಲೆ ಭಯ ಬರುವಂತಹ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲೆ  ಮಕ್ಕಳ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಬಂದತಹ ಪೋಷಕರು ತಮ್ಮ ಮಕ್ಕಳನ್ನು ಮಕ್ಕಳ ಮನೆಯಲ್ಲಿ ಬಿಟ್ಟು ತಮ್ಮ ದೂರನ್ನು ಇಲ್ಲಿ ಸಲ್ಲಿಸಬಹುದು.

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಪಿ ಇಶಾ ಪಂಥ್, ಚಿಕ್ಕಂದಿನಿಂದಲೆ ಮಕ್ಕಳಲ್ಲಿ ಭಯದ ವಾತವರಣ ನಿರ್ಮಾಣವಾದರೆ  ಅದು ಮುಂದುವರೆದುಕೊಂಡೆ ಹೋಗುತ್ತದೆ. ಸುಮಾರು ಜನ ಠಾಣೆಗೆ ಬಂದು ಹೋಗ್ತಾರೆ ಅವರೊಂದಿಗೆ ಚಿಕ್ಕ ಮಕ್ಕಳನ್ನು ತರುತ್ತಾರೆ. ಇದು ಒಂದು ರೀತಿ ಮಕ್ಕಳಲ್ಲಿ ಭಯದ ವಾತವರಣ ನಿರ್ಮಾಣಮಾಡುತ್ತದೆ ಈ ನಿಟ್ಟಿನಲ್ಲಿ ಅವರಿಗೆ ಒಂದು ಆಟ ಆಡುವ ಮನೆ ಮಾಡಿದ್ರೆ ಚೆನ್ನಾಗಿರುತ್ತೆ ಎನ್ನುವ ನಿಟ್ಟಿನಲ್ಲಿ ಇನ್ಸ್ ಪೆಕ್ಟರ್ ರಾಘವೇಂದ್ರ ರವರಿಗೆ ತಿಳಿಸಿದಾಗ ಅವರು ಇಷ್ಟು ಚೆನ್ನಾಗಿ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ ಎಂದರು.

ಇನ್ನು ಇನ್ಸ್ ಪೆಕ್ಟರ್ ರಾಘವೇಂದ್ರ ಮಕ್ಕಳ ಮನೆಯ ಬಗ್ಗೆ ಹಂಚಿಕೊಂಡಿದ್ದು ಹೀಗೆ

ಒಟ್ಟಾರೆ  ಪೊಲೀಸ್ ಠಾಣೆಯಲ್ಲಿ ಈ ಮಕ್ಕಳ ಮನೆಯನ್ನು ನಿರ್ಮಾಣ ಮಾಡಿದ ಹಿನ್ನಲೆಯಲ್ಲಿ, ಹೆಚ್ ಎಸ್ ಆರ್ ಪೊಲೀಸ್ ಠಾಣೆ  ರಾಜ್ಯದಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಮಕ್ಕಳಲ್ಲಿ ಭಯದ ವಾತವರಣ ಹೋಗಲಾಡಿಸುವ ನಿಟ್ಟಿನಲ್ಲಿ ಈ ರೀತಿ ಚಿಂತನೆ ನಿಜಕ್ಕೂ ಮೆಚ್ಚುವಂತದ್ದು ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos