ಕೊಲದೇವಿಯಲ್ಲಿ ಗರುಡನ ದೇವಾಲಯ

ಕೊಲದೇವಿಯಲ್ಲಿ ಗರುಡನ ದೇವಾಲಯ

ಕೋಲಾರ , ನ. 1 : ಸನಾತನ ಧರ್ಮದಲ್ಲಿ ಪ್ರತಿಯೊಂದು ಜೀವಿ ಹಾಗು ವಸ್ತುವಿನಲ್ಲಿಯು ದೈವತ್ವ ಕಾಣುವುದು ಸಾಮಾನ್ಯ. ಗರುಡ ಒಂದು ಜಾತಿಯ ಪಕ್ಷಿ. ಪುರಾಣಗಳ ಪ್ರಕಾರ ಗರುಡ ಶ್ರೀಮಹಾವಿಷ್ಣುವಿನ ವಾಹನ ಎಂದೇ ಗುರುತಿಸಿಕೊಂಡಿದೆ. ಗರುಡನಿಗೂ ಕೂಡ ಒಂದು ಮಹಿಮಾನ್ವಿತವಾದದೇವಾಲಯವಿದೆ. ಆ ದೇವಾಲಯಕ್ಕೆ ಭೇಟಿ ನೀಡಿದರೆ ಸಂತಾನ ಇಲ್ಲದೇ ಇರುವವರಿಗೆಸಂತಾನವಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿಯೇ ಆ ದೇವಾಲಯಕ್ಕೆ ದಿನನಿತ್ಯವು ನೂರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ.ಅಸಲಿಗೆ ಆ ದೇವಾಲಯ ಇರುವುದು ಬೇರೆ ಎಲ್ಲೂ ಅಲ್ಲ, ನಮ್ಮ ಕರ್ನಾಟಕದ ಕೋಲಾರಜಿಲ್ಲೆಯಲ್ಲಿ. ಕೋಲಾರದ ಮುಳಬಾಗಿಲು ತಾಲೂಕಿನಿಂದ 18 ಕಿ.ಮೀ ದೂರದಲ್ಲಿರುವ ಒಂದುಗ್ರಾಮದಲ್ಲಿ. ಈ ದೇವಾಲಯದಲ್ಲಿರುವ ವಿಗ್ರಹದ ಹಾಗೆ ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲ ಎಂದು ಗುರುತಿಸಲಾಗಿದೆ.
ಎಲ್ಲಿದೆ?
ಈ ಮಹಿಮಾನ್ವಿತವಾದ ದೇವಲಯವು ಕರ್ನಾಟಕ ರಾಜ್ಯದಲ್ಲಿನ ಕೋಲಾರ ಜಿಲ್ಲೆಯ, ಮುಳಬಾಗಿಲುತಾಲೂಕಿನ ಕೊಲದೇವಿ ಎಂಬ ಗ್ರಾಮದಲ್ಲಿ ಇದೆಯಂತೆ. ಸಂತಾನ ಇಲ್ಲದೇ ಇರುವವರು ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ.  ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಕೊಲಾದೇವಿ ಗ್ರಾಮಕ್ಕೆ ಸುಮಾರು 2:30ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಬೆಂಗಳೂರಿನಿಂದ ಕೋಲಾರಿಗೆ ಸೇರಿಕೊಳ್ಳುವುದಕ್ಕೆಪ್ರತಿ ನಿತ್ಯವು ಬಸ್ಸುಗಳು ದೊರೆಯುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos