ಪತ್ರಕರ್ತರಿಂದು ಆತಂಕದಲ್ಲಿ!

ಪತ್ರಕರ್ತರಿಂದು ಆತಂಕದಲ್ಲಿ!

ಬೆಂಗಳೂರು, ಸೆ. 12: ಪತ್ರಿಕೋದ್ಯಮ ಇತ್ತೀಚಿನ ದಿನಗಳಲ್ಲಿ ಉದ್ಯಮದತ್ತ ವಾಲುತ್ತಿರುವುದು ಅತ್ಯಂತ ಗಂಭೀರ ವಿಚಾರ. ಹಾಗೂ  ಆತಂಕಕಾರಿ ಬೆಳವಣಿಗೆಯ ವಾತಾವರಣ ಸೃಷ್ಟಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ  70 ನೇ ವಾರ್ಷಿಕೋತ್ಸವ ಅಂಗವಾಗಿ ಎಫ್ ಕೆಸಿಸಿಐ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತ ಹಾಗೂ ಉದ್ಯಮ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಪತ್ರಿಕೋದ್ಯಮ ಇಂದು ಉದ್ಯಮ ಆಗಿ ಮಾರ್ಪಟ್ಟಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಕರ್ತರ ಸ್ಥಿತಿ ಗತಿ ಬಗ್ಗೆ ಸಾಕಷ್ಟು ಚರ್ಚೆಯಾಗಬೇಕಿರುವುದು ಅತ್ಯಂತ ಅನಿವಾರ್ಯ ವಾಗಿದೆ ಎಂದರು.

ಎಲೆಕ್ಟ್ರಾನಿಕ್ ಮಾದ್ಯಮದಲ್ಲಿಂದು ಪತ್ರಕರ್ತರು ವಿಪರೀತ ವಿಷಮ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಕಷ್ಟಗಳ ನಡುವೆಯೂ ಕೆಲಸ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ. ಯುವ ಪತ್ರಕರ್ತರ ಸ್ಥಿತಿ ಅತ್ಯಂತ ಶೋಚನೀಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಮರುಕ ವ್ಯಕ್ತಪಡಿಸಿದರು.

ಮಾದ್ಯಮ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳ ಜೊತೆಯಲ್ಲಿ ಅನೇಕ ಸವಾಲುಗಳು ಎದುರಾಗುತ್ತಿವೆ. ಆದರೆ ಪತ್ರಕರ್ತರಾಗಿ ಕೆಲಸ ಮಾಡುವವರಿಗೆ ಯಾವುದೇ ಗ್ಯಾರಂಟಿ ಇಲ್ಲ. ಇಂತಹ ಒತ್ತಡ ಪರಿಸ್ಥಿತಿಯಲ್ಲಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಕರ್ತರನ್ನು ಉದ್ಯೋಗಿಗಳಾಗಿ ನೋಡುವುದೇ ಕಷ್ಟ. ನಿರ್ಭಯವಾಗಿ ಎಲ್ಲಾ ವಿಚಾರಗಳನ್ನು ಬಯಲಿಗೆಳೆದು ವರದಿ ಮಾಡುವುದೇ ಬೇರೆ. ಇದು ಒಂದು ಉದ್ಯಮವಾದರೆ ಕೇವಲ ಲಾಭ, ನಷ್ಟದ ಬಗ್ಗೆ ಯೋಚನೆ ಮಾಡುತ್ತಾರೆ ಎಂದು ತಿಳಿಸಿದರು.

ಪತ್ರಕರ್ತರ ಬಗ್ಗೆ ಚಿಂತನೆ ಆರಂಭವಾಗಿದೆ. ಮುಂದುವರೆದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುವ ಅಗತ್ಯವಿದೆ ಎಂದು ಹೇಳಿದರು .

ಕಾರ್ಯಾಗಾರದಲ್ಲಿ ಮಾಜಿ ಎಫ್ ಕೆಸಿಸಿಐನ ಅಧ್ಯಕ್ಷ ತಲ್ಲಮ್ಮ ವೆಂಕಟೇಶ, ಎಂಎಸ್ಎಂವಿ ನ ಹೆಚ್ಚುವರಿ ನಿರ್ದೇಶಕ ಹೊನ್ನಮಾನೆ ವಿಚಾರ ಮಂಡಿಸಿದರು. ಕರ್ನಾಟಕ ಸಣ್ಣ ಕೈಗಾರಿಕಾ ಅಧ್ಯಕ್ಷ ಆರ್.ರಾಜು,ಎಫ್ ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್ ,ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ  ಎಂ.ಎಸ್ ರಾಜೇಂದ್ರಕುಮಾರ್ ಇತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos