ರೋಗ ನಿರೋಧಕ ಔಷಧಿ ವಿತರಣೆ

ರೋಗ ನಿರೋಧಕ ಔಷಧಿ ವಿತರಣೆ

ಕೋಲಾರ: ಸಾರ್ವಜನಿಕರ ಕೆಲಸ ಮಾಡುವ ಬ್ಯಾಂಕ್ ಸಿಬ್ಬಂದಿ ಜತೆಗೆ ಸೊಸೈಟಿಗಳ ಸಿಬ್ಬಂದಿಗೂ ಕೋವಿಡ್ ನಿಯಂತ್ರಿಸಲು ಕಾರಣವಾದ ರೋಗ ನಿರೋಧಕ ಶಕ್ತಿ ವೃದ್ದಿಸುವ ಔಷಧಿಯನ್ನು ಆಯುಷ್ ಇಲಾಖೆ ನೀಡಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಸಿಬ್ಬಂದಿಗೆ ಆಯುಷ್ ಇಲಾಖೆ ನೀಡುವ ರೋಗ ನಿರೋಧಕ ಶಕ್ತಿ ವೃದ್ದಿಸುವ ಔಷಧಿಗಳನ್ನು ವಿತರಿಸಿ ಮಾತನಾಡಿದರು. ನಗರದ ಎಸ್.ಎನ್.ಆರ್. ಆಯುಷ್ ಆಸ್ಪತ್ರೆಯ ಡಾ.ಬಸವರಾಜ್ ವಿಶ್ವದಾದ್ಯಂತ ಕಾಡುತ್ತಿರುವ ಕೋವಿಡ್-೧೯ ನಿಯಂತ್ರಿಸಲು ರೋಗ ನಿರೋಧಕ ಶಕ್ತಿ ವೃದ್ದಿಸುವ ಔಷಧಿಗಳನ್ನು ಆರೋಗ್ಯ ಇಲಾಖೆ ವ್ಯಾಪ್ತಿಯ ಆಯುಷ್ ಇಲಾಖೆ ವತಿಯಿಂದ ವಾರಿಯರ‍್ಸ್ಗಳಿಗೆ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಈ ಔಷಧಿಗಳು ಬಹಳ ಮಹತ್ವದ್ದಾಗಿದೆ. ಎರಡು ಮಾದರಿಯ ಮಾತ್ರೆಗಳು ಹಾಗೂ ದ್ರಾವಕದ ಪ್ಯಾಕೇಟ್‌ಗಳನ್ನು ನೀಡಲಾಗುತ್ತಿದೆ. ಈಗಾಗಲೇ ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವವರಿಗೆ ಪ್ರಥಮ ಅಧ್ಯತೆ ನಿಡಲಾಗುತ್ತಿದೆ ಎಂದರು.
ಸಮಾಜ ಸೇವಕ ಉಮಾಪತಿ ಮಾತನಾಡಿ ಈಗಾಗಲೇ ಈ ಔಷಧಿಗಳನ್ನು ಪೌರಕಾರ್ಮಿಕರಿಗೆ, ಕೆ.ಈ.ಬಿ ನೌಕರರಿಗೆ, ಪತ್ರಕರ್ತರ ಸಂಘಕ್ಕೆ ಸೇರಿದಂತೆ ಅನೇಕ ಕಡೆ ಆಯುಷ್ ಇಲಾಖೆ ವಿತರಿಸಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳಿಗೂ ಔಷಧಿಯನ್ನು ವಿತರಿಸಿ ಮುಂದಿನ ದಿನಗಳಲ್ಲಿ ಈ ಔಷಧಿಯಲ್ಲಿ ಎರಡು ಜಿಲ್ಲೆಯ ಎಲ್ಲಾ ಸೊಸೈಟಿಗಳಿಗೆ ಎರಡು ಜಿಲ್ಲೆಯ ಎಲ್ಲಾ ಬ್ಯಾಂಕಿನ ಸಿಬ್ಬಂದಿಗಳಿಗೆ ವಿತರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos