ಐಎಂಎ: 32 ರಿವಾಲ್ವರ್, 11.72 ಕೋ.ರೂ. ಮೌಲ್ಯದ ಸೊತ್ತು ವಶ

ಐಎಂಎ: 32 ರಿವಾಲ್ವರ್, 11.72 ಕೋ.ರೂ. ಮೌಲ್ಯದ ಸೊತ್ತು ವಶ

ಬೆಂಗಳೂರು, ಜೂ.25: ನಗರದಲ್ಲಿ ಸಾವಿರಾರು ಜನರಿಗೆ ನಂಬಿಸಿ ಹಣವನ್ನು ದೋಚಿಕೊಂಡು ಮೊಸ ಮಾಡಿರುವ ಐಎಂಎ ಸಂಸ್ಥೆಯ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ ನಗರದ ಶಿವಾಜಿ ನಗರದ ಲೇಡಿ ಕರ್ಝನ್ ರಸ್ತೆಯಲ್ಲಿರುವ ಐಎಂಎ ಗೋಲ್ಡ್ ಮತ್ತು ಜ್ಯುವೆಲ್ಲರಿ ಮಳಿಗೆಗೆ ದಾಳಿ ನಡೆಸಿದೆ. ಈ ವೇಳೆ ಒಟ್ಟು 11.72 ಕೋ.ರೂ. ವೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೆನ್ನೆ ನಡೆಸಿದ ಕಾರ್ಯಾಚರಣೆಯ ವೇಳೆ ಲೇಡಿ ಕರ್ಝನ್ ರಸ್ತೆಯಲ್ಲಿರುವ ಐಎಂಎ ಗೋಲ್ಡ್ ಮಳಿಗೆಯಲ್ಲಿ ಸುಮಾರು 11.34 ಕೋಟಿ ರೂ. ವೌಲ್ಯದ 41 ಕೆಜಿ ಚಿನ್ನಾಭರಣ, 8.97 ಲಕ್ಷ ರೂ. ವೌಲ್ಯದ 71 ಕೆ.ಜಿ. ಬೆಳ್ಳಿಯ ಗಟ್ಟಿ ಹಾಗೂ 5.60 ಲಕ್ಷ ರೂ. ನಗದು ಪತ್ತೆಯಾಗಿದೆ. 2 ಬಾರಿ ನಡೆಸಿದ ಕಾರ್ಯಾಚರಣೆಯ ವೇಳೆ ಪರವಾನಿಗೆಯುಕ್ತ 32 ರಿವಾಲ್ವರ್, 58 ಸಜೀವ ಗುಂಡುಗಳು ಸೇರಿದಂತೆ ಒಟ್ಟು 11,72,72,000 ರೂ. ವೌಲ್ಯದ ಸೊತ್ತುಗಳನ್ನು ವಿಶೇಷ ಪೊಲೀಸ್ ತಂಡ ವಶಪಡಿಸಿಕೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos