ಐಲವ್ ಯು’ ಸಿನಿಮಾ 22 ಕೋಟಿ ಕಲೆಕ್ಷನ್

ಐಲವ್ ಯು’ ಸಿನಿಮಾ  22 ಕೋಟಿ ಕಲೆಕ್ಷನ್

ಬೆಂಗಳೂರು, ಜೂ. 26 : ಕನ್ನಡ ಮತ್ತು ತೆಲುಗು ವರ್ಷನ್ ಎರಡು ಸೇರಿ ಇದುವರೆಗೂ ಅಂದಾಜು ರೂ.22 ಕೋಟಿ ಕಲೆಕ್ಷನ್ ಆಗಿದೆ.‘ಐ ಲವ್ ಯೂ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿರುವುದೇ ಅದಕ್ಕೆ ಕಾರಣ.

ಚಿತ್ರ ತೆರೆ ಕಂಡು ಇಲ್ಲಿಗೆ ಹೆಚ್ಚು ಕಡಿಮೆ ಎರಡು ವಾರ. ಕನ್ನಡ ಮತ್ತು ತೆಲುಗು ವರ್ಷನ್ ಎರಡು ಸೇರಿ ಇದುವರೆಗಿನ ಒಟ್ಟು ಕಲೆಕ್ಷನ್ ರೂ. 22 ಕೋಟಿ ಆಗಿದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು. ಅಷ್ಟೇ ಅಲ್ಲ, ಈ ವಾರದಿಂದಲೂ ಮತ್ತೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹಾಗೆಯೇ ಅಮೆರಿಕದಲ್ಲೂ ಚಿತ್ರ ಬಿಡುಗಡೆ ಆಗುತ್ತಿದೆ. ಸಹಜವಾಗಿಯೇ ಇದು ನಿರ್ಮಾಪಕ ಕಮ್ ನಿರ್ದೇಶಕ ಚಂದ್ರು ಅವರಿಗೆ ಬಂಪರ್ ಲಾಟರಿ ಹೊಡೆದಂತೆಯೇ ಆಗಿದೆ. ನಿರ್ಮಾಪಕ ಆರ್ ಚಂದ್ರು ಮುಖದಲ್ಲಿ ಮಂದಹಾಸ ಮೂಡಿದೆ

 

ಫ್ರೆಶ್ ನ್ಯೂಸ್

Latest Posts

Featured Videos