‘ಐ ಲವ್ ಯು’ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್

‘ಐ ಲವ್ ಯು’ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್

ಬೆಂಗಳೂರು, ಮೇ. 13, ನ್ಯೂಸ್ ಎಕ್ಸ್ ಪ್ರೆಸ್ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ‘ಐ  ಲವ್ ಯು’ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಶುರು ಆಗಿದೆ. ಉಪೇಂದ್ರ ಸಿನಿಮಾಗಳು ಅಂದರೆ, ವಿಭಿನ್ನ ಲುಕ್,  ಮಾಸ್ ಪಂಚಿಂಗ್ ಡೈಲಾಗ್ ಕೇಳೋಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  ಸದ್ಯ ಉಪ್ಪಿ ಮತ್ತು ಚಂದ್ರು ಕಾಂಬಿನೇಷನ್ನ ‘ಐ ಲವ್ ಯು’ಸಿನಿಮಾ  ಡಿಫ್ರೆಂಟ್ ಪೊಸ್ಟರ್, ಹಾಡುಗಳು ಹಾಗೂ ಟ್ರೈಲರ್ ನಿಂದ ನೋಡುಗರ ಮನಸೆಳೆದಿದ್ದು,  ಜೂನ್ ಇದೇ ತಿಂಗಳ 14 ಕ್ಕೆ ತೆರೆ ಕಾಣಲಿದೆ. ಈಗಾಗಲೇ ಚಿತ್ರದ ಕ್ರೇಜ್ ಹೆಚ್ಚಾಗಿದ್ದು, ಇದೀಗ ಅಡ್ವಾನ್ಸ್  ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಕೂಡ ಪ್ರಾರಂಭವಾಗಿವೆ.

ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಮೂರು ರಾಜ್ಯಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ. ಕನ್ನಡದ ಕೆಜಿಎಫ್ ಚಿತ್ರದ ಬಳಿಕ  ‘ಐ ಲವ್ ಯು’ಸಿನಿಮಾ ಇಂಥದ್ದೊಂದು ದಾಖಲೆ ನಿರ್ಮಿಸಲಿದೆ. ಚಿತ್ರ ಲವ್, ಸೆಂಟಿಮೆಂಟ್, ಕಥೆಯನ್ನು ಹೊಂದಿದ್ದು,  ಪ್ರೀತಿ-ಪ್ರೇಮದ ಪಾಠವನ್ನು ಉಪ್ಪಿ ಬೋಧಿಸಲಿದ್ದಾರೆ.  ನಾಯಕಿ ರಚಿತರಾಮ್ ಹಾಗೂ ಸೋನುಗೌಡ ಕಾಣಿಸಿಕೊಂಡಿದ್ದು, ಚಿತ್ರದ ಹಾಡುಗಳಿಗೆ ಡಾ.ಕಿರಣ್ ಸಂಗೀತವಿದೆ.

ಫ್ರೆಶ್ ನ್ಯೂಸ್

Latest Posts

Featured Videos