ಎತ್ತಿನಹೊಳೆ ಯೋಜನೆಯಲ್ಲಿ ಅಕ್ರಮ ಆರೋಪ

ಎತ್ತಿನಹೊಳೆ ಯೋಜನೆಯಲ್ಲಿ ಅಕ್ರಮ ಆರೋಪ

ಬೇಲೂರು: ಎತ್ತಿನಹೊಳೆ ಯೋಜನೆಯಿಂದ ನಾವು ಬೆಲೆಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಯೋಜನೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ. ಮನಬಂದಂತೆ ಕೆಲಸ ಮಾಡಲಾಗುತ್ತಿದೆ. ರೈತರ ಭೂಮಿಗೆ ಸರಿಯಾಗಿ ಪರಿಹಾರ ನೀಡುತ್ತಿಲ್ಲ. ಬೇಕಾಬಿಟ್ಟಿ ಎಲ್ಲೆಂದರಲ್ಲಿ ಭೂಮಿ ಅಗೆದು ನಂತರ ಇದೀಗ ಸರ್ವೆ ಮಾಡುವುದಕ್ಕೆ ಹೋಗುವುದು ಕಂಡುಬರುತ್ತಿದೆ.
ಇಡಿ ಜಿಲ್ಲೆಗೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ ಎಂದರು. ಹಿಂದಿನ ಸರ್ಕಾರದ ವೇಳೆ ಎತ್ತಿನಹೊಳೆ ಯೋಜನೆಗೆ ಹಣದ ಕೊರತೆಯಿಲ್ಲ ಎನ್ನುತ್ತಿದ್ದ ನೀವು ಇದೀಗ ೪೩೪ ಕೋಟಿ ರೂ. ಬರಲಿದ್ದ ಅನುದಾನದಲ್ಲಿ ಕೇವಲ ೪೯ ಕೋಟಿರೂ. ಬಂದಿದೆ ಎಂದು ಹೇಳುತ್ತಿದ್ದೀರಿ. ಹಾಗಾದರೆ ಬರಬೇಕಿದ್ದ ಹಣ ಎಲ್ಲಿ ಹೋಯಿತು ಎಂದು ಎತ್ತಿನಹೊಳೆ ಎಂಜಿನಿಯರ್ ಎಇಇ ರಮೇಶ್ ಅವರನ್ನು ಪ್ರಶ್ನಿಸಿದರು. ಸಂಸದರ ಪ್ರಶ್ನೆಗೆ ತಡಬಡಾಯಿಸುತ್ತಲೇ ಉತ್ತರಿಸಿದ್ದನ್ನು ಗಮನಿಸಿದ ಪ್ರಜ್ವಲ್ ರೇವಣ್ಣ ಅವರು, ಸಮಯಕ್ಕೆ ಸರಿಯಾಗಿ ಮಾತನಾಡುವುದನ್ನು ಕಲಿತಿದ್ದೀರಾ, ನೀವು ರಾಜಕೀಯಕ್ಕೆ ಬಂದು ಬಿಡಿ ಎಂದು ಎಂಜಿನಿಯರ್‌ಗೆ ಸಲಹೆ ನೀಡಿದರು.

ಸಾವು ಕಡಿಮೆಯಿಲ್ಲ:
ಕೊರೋನಾ ಸಾವು ಕಡಿಮೆಯಾಗಿಲ್ಲ. ಕೊರೋನಾ ವಾರಿರ‍್ಸ್ ಆಗಿ ಕರ್ತವ್ಯನಿರ್ವಹಿಸುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಜನರೆ ಜಾಗೃತಿ ಮೂಡಿಸಬೇಕಿದೆ. ಮೀನುಗಾರಿಕೆ, ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಬಂದವೇಳೆ ಶಾಸಕರ ಗಮನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಎಸಿ ಗಿರಿಶ್‌ನಂದನ್, ಡಿವೈಎಸ್‌ಪಿ ನಾಗೇಶ್, ತಹಸೀಲ್ದಾರ್ ನಟೇಶ್, ಇಒ ರವಿಕುಮಾರ್, ಶಾಸಕ ಕೆ.ಎಸ್.ಲಿಂಗೇಶ್, ತಾ.ಪಂ.ಅಧ್ಯಕ್ಷೆ ಇಂದಿರಾರವಿಕುಮಾರ್ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos