ಅಕ್ರಮ ಚಿನ್ನದ ಪೇಸ್ಟ್ ಸಾಗಾಟ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರ ಬಂಧನ

  • In Crime
  • January 19, 2019
  • 231 Views
ಅಕ್ರಮ ಚಿನ್ನದ ಪೇಸ್ಟ್ ಸಾಗಾಟ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರ ಬಂಧನ

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ
ಅಕ್ರಮವಾಗಿ ಚಿನ್ನದ ಪೇಸ್ಟ್ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಸ್ಟಂ ಅಧಿಕಾರಿಗಳು
ಬಂಧಿಸಿದ್ದಾರೆ.

ಭಟ್ಕಳ ಮೂಲದ ಫಾತಿಮಾ ಮತ್ತು ಸಬೀನಾ ಬಂಧಿತರು. ಇಬ್ಬರು ಮಹಿಳಾ ಪ್ರಯಾಣಿಕರಿಂದ 10.16 ಲಕ್ಷ ರೂ. ಮೌಲ್ಯದ 314 ಗ್ರಾಂ. ಚಿನ್ನದ ಪೇಸ್ಟ್ ವಶಪಡಿಸಿಕೊಳ್ಳಲಾಗಿದೆ. ದುಬೈಯಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಇಬ್ಬರು ಪ್ರಯಾಣಿಕರು ಒಳ ಉಡುಪಿನಲ್ಲಿ ಚಿನ್ನದ ಪೇಸ್ಟ್​ ಇಟ್ಟು ಕಳ್ಳ ಸಾಗಾಣಿಕೆ ಮಾಡಿದ್ದರು. 

ಮೊದಲ ಪ್ರಕರಣದಲ್ಲಿ ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ 4.53 ಲಕ್ಷ ರೂ. ಮೌಲ್ಯದ 140 ಗ್ರಾಂ ಚಿನ್ನದ ಪೇಸ್ಟ್ ಪತ್ತೆಯಾಗಿದೆ. ಇನ್ನೊಂದು ಪ್ರಕರಣದಲ್ಲಿ 5.63 ಲಕ್ಷ ರೂ. ಮೌಲ್ಯದ 174 ಗ್ರಾಂ ಚಿನ್ನದ ಪೇಸ್ಟ್ ಪತ್ತೆಯಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 27,56,436 ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ ಹಚ್ಚಲಾಗಿದೆ. ರಾಸಾಯನಿಕ ಬಳಸಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಾಟ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos