ಅಕ್ರಮವಾಗಿ ನೆಲೆಸಿದ್ದ 6೦ ಬಾಂಗ್ಲನ್ನರ ಬಂಧನ

ಅಕ್ರಮವಾಗಿ ನೆಲೆಸಿದ್ದ 6೦ ಬಾಂಗ್ಲನ್ನರ ಬಂಧನ

ಬೆಂಗಳೂರು, ಅ. 26: ನಗರದಲ್ಲಿ ಕಾನೂನು ಬಾಹೀರ ಚಟುವಟಿಕೆಗಳ ಹೆಚ್ಚಾದ ಹಿನ್ನೆಲೆಯಲ್ಲಿ ವಿದೇಶಿ ಪ್ರಜೆಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಿದ ಕೇಂದ್ರ ಅಪರಾಧ ದಳದ ಪೋಲಿಸರು ಅಕ್ರಮವಾಗಿ ನೆಲೆಸಿದ್ದ 6೦ಕ್ಕೂ ಹೆಚ್ಚು ಮಂದಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದಾರೆ.

ನಗರದ ಮಾರತ್‌ಹಳ್ಳಿ, ಕೆ.ಆರ್.ಪುರ, ರಾಮಮೂರ್ತಿನಗರ, ಹೆಚ್‌ಇಎಲ್ ಸೇರಿದಂತೆ ಇತರೆಡೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದವರ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ 6೦ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಜಂಟಿ ಪೋಲಿಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಬಂಧಿಸಲ್ಪಟ್ಟಿರುವ ಬಾಂಗ್ಲ ಪ್ರಜೆಗಳ ಮೇಲೆ ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಪಾಸ್‌ಪೋರ್ಟ್, ವೀಸಾ ಪರಿಶೀಲನೆ ಮಾಡಲಗುತ್ತಿದೆ. ಹಲವು ವರ್ಷಗಳಿಂದ ನೆಲೆಸಿರುವ ಕೆಲವು ಬಾಂಗ್ಲಾ ಪ್ರಜೆಗಳು ಅನಧಿಕೃತವಾಗಿ ಆಧಾರ್ ಕಾರ್ಡ್ ಹಾಗೂ ಇನ್ನಿತರ ಸರ್ಕಾರಿ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಪಡೆದಿರುವ ಬಗ್ಗೆ ಮಾಹಿಯಿತಿಯಿದ್ದು, ಸಂಪೂರ್ಣವಾಗಿ ತಪಾಸಣೆ ಮಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಲವು ವರ್ಷಗಳ ಹಿಂದೆ ವಲಸೆ ಬಂದು ನಗರದಲ್ಲಿ ನೆಲೆಸಿರುವ ಬಹುತೇಕ ಬಾಂಗ್ಲಾ ಪ್ರಜೆಗಳು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಕೆಲವರು ಸ್ಥಳಿಯವಾಗಿಯೇ ಸಂಬಂಧ ಬೆಳೆಸಿಕೊಂಡು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಬಂಧಿತ ಬಾಂಗ್ಲಾ ಪ್ರಜೆಗಳು ಎಷ್ಟು ವರ್ಷಗಳಿಂದ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ.ಅವರ ವೀಸಾ ಅವಧಿ ಎಷ್ಟು ವರ್ಷ? ಯಾವ ಉದ್ದೇಶಕ್ಕೆ ಬಂದಿದ್ದರೆಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು. ಬಂಧಿತ ಬಾಂಗ್ಲಾ ಪ್ರಜೆಗಳಲ್ಲಿ 29 ಪುರುಷರು, 22 ಮಹಿಳೆಯರು,9 ಮಂದಿ ಯುವತಿಯರು ಸೇರಿ 6೦ ಮಂದಿ ಅಕ್ರಮ ವಲಸಿಗರಿದ್ದಾರೆ.ಅವರನ್ನು ವಾಪಸ್ ಕಳುಹಿಸಲು ಡಿ ಪೋರ್ಟ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

ಅಕ್ರಮ ವಲಸಿಗರು ನೆಲೆಸಿರುವ ಬಗ್ಗೆ ದೂರುಗಳು ಬಂದಿದ್ದವು.ಕೇಂದ್ರ ಗುಪ್ತಚರ ಇಲಾಖೆ,ಅಕ್ರಮ ವಿದೇಶಿ ವಲಸಿಗರ ನಿಗವಹಿಸಿ ಚಟುವಟಿಕೆಗಳ ಮೇಲೆ ನಿಗವಹಿಸುವಂತೆ ಎಚ್ಚರಿಕೆ ನೀಡಿತ್ತು. ಹಾಗಾಗಿ ಬಾಂಗ್ಲಾ ವಲಸಿಗರನ್ನು ಬಂಧಿಸಲಾಗಿದೆಎಂದು ತಿಳಿಸಿದರು.

7 ಅಫ್ರಿಕನ್ನರು

ವಿದ್ಯಾರ್ಥಿ ಹಾಗು ಪ್ರವಾಸಿ ವೀಸಾದಡಿ ನಗರಕ್ಕೆ ಬಂದು ವೀಸಾ ಅವಧಿ ಮುಗಿದಿದ್ದರೂ,ಅಕ್ರಮವಾಗಿ ನೆಲೆಸಿದ್ದ 7 ಆಫ್ರಿಕಾ ದೇಶದ ಪ್ರಜೆಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಹೇಳಿದರು.

ಇತ್ತೀಚೆಗಷ್ಟೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಷ್ಟ್ರೀಯ ನಾಗರೀಕರ ನೊಂದಣಿ ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ನಗರದಲ್ಲಿ 6೦ ಮಂದಿ ಅಕ್ರಮ ಬಾಂಗ್ಲಾ ವಿದೇಶಿಗರ ಪತ್ತೆ. ಹಲವು ವರ್ಷಗಳಿಂದ ನಗರದಲ್ಲೇ ನೆಲೆಸಿದ್ದ ಬಾಂಗ್ಲಾ ಪ್ರಜೆಗಳು. ವಿಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದರು. ಅಕ್ರಮ ಬಾಂಗ್ಲಾ ಪ್ರಜೆಗಳ ಜೊತೆಯಲ್ಲಿ 7 ಮಂದಿ ಅಫ್ರಿಕನ್ನರ ಪತ್ತೆ ಹಚ್ಚಿದ ಸಿಸಿಬಿ ಪೋಲಿಸರು. ಅಕ್ರಮ ವಿದೇಶಿಗರನ್ನು ಗಡಿಪಾರು ಮಾಡಲು ಪ್ರಕ್ರಿಯೆ ಆರಂಭಿಸಿರುವ ಪೋಲಿಸರು

 

ಫ್ರೆಶ್ ನ್ಯೂಸ್

Latest Posts

Featured Videos