ಬಾಳೆ ಎಲೆಯಲ್ಲಿ ಊಟ ಮಾಡಿದರೆ ಶಾಕ್ ಆಗ್ತೀರಾ..!

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಶಾಕ್ ಆಗ್ತೀರಾ..!

ಬೆಂಗಳೂರು, ಡಿ. 3 : ಭಾರತೀಯರ ರೂಢಿಯಂತೆ ಬಾಳೆ ಎಲೆಯಲ್ಲಿ ಊಟ ಮಾಡುವುದು ಸಂತಸದ ವಿಚಾರವೇ ಸರಿ. ನಾವು ಸಭೆ ಸಮಾರಂಭಗಳಲ್ಲಿ ಮದುವೆ ಮನೆಯಲ್ಲಿ ಹೆಚ್ಚು ಬಾಳೆಯಲ್ಲಿಊಟ ಮಾಡುತ್ತೇವೆ. ಹೆಚ್ಚು ಅಂದರೆ ವಿಶೇಷವಾಗಿ ಹಬ್ಬಗಳಲ್ಲಿ ಬಾಳೆ ಎಲೆ ತಂದು ಊಟ ಮಾಡುವುದು ವಾಡಿಕೆ. ಆದರೆ ದಿನಾ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಅನೇಕ ಪ್ರಯೋಜನಗಳಿದೆ.
ಆಯುರ್ವೇದವಾಗಿ ನಮ್ಮ ಬಾಳೆ ಎಲೆಯ ಮೇಲ್ಪದರದಲ್ಲಿ ಎಪಿಗಾಲ್ಸೊ ಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿ ಫೀನಾಲ್ ಅಂಶ ಇದೆ. ಇದರಿಂದಾಗಿಯೇ ಬಿಸಿ ಆಹಾರವು ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ದೇಹಕ್ಕೆ ಸೇರುತ್ತವೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗಿ ಚೆನ್ನಾಗಿ ಆಗುತ್ತದೆ. ಇನ್ನು ಸಾಮಾನ್ಯವಾಗಿ ಬಾಳೆ ಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಹುಕಾಲ ಉಳಿಯುವುದಿಲ್ಲ. ಎಲೆಯಲ್ಲಿ ಯಾವುದೇ ಆಹಾರವನ್ನು ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಬದುಕುವುದಿಲ್ಲ. ಪ್ರಮುಖವಾಗಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ರಾಸಾಯನಿಕಗಳನ್ನು ಕೊಲ್ಲುತ್ತದೆ. ಬಿಳಿ ಕೂದಲಿನ ಸಮಸ್ಯೆಯಿದ್ದವರು ನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಕಡಿಮೆಯಾಗುತ್ತದೆ. ಇದು ಊಟ ಆರೋಗ್ಯಕ್ಕೆ ತಂಪು. ಹಾಗೆ ಚರ್ಮರೋಗಗಳು ಬಾರದಂತೆ ತಡೆಯುತ್ತದೆ. ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ ಮಿಶ್ರಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಗುಳ್ಳೆಗಳು ಮಾಯವಾಗುತ್ತವೆ.

ಫ್ರೆಶ್ ನ್ಯೂಸ್

Latest Posts

Featured Videos