ಕೊಲೆಯೊ ಆತ್ಮಹತ್ಯೆಯೋ?

ಕೊಲೆಯೊ ಆತ್ಮಹತ್ಯೆಯೋ?

ಹಾಸನ, ಅ. 21 : ಇಂದು ಬೆಳಗ್ಗೆ ಹೋಟೆಲ್ನ ಹಿಂಭಾಗ ಭವಿತಾ ಮೃತದೇಹ ಪತ್ತೆಯಾಗಿದೆ. ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುವುದು ತಿಳಿದು ಬಂದಿಲ್ಲ. ಕೈ ಮೇಲೆ ಪುನಿತ್ ಎಂದು ಹಚ್ಚೆ ಹಾಕಿಸಿಕೊಂಡಿದ್ದು, ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಷಕರು ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಖಾಸಗಿ ಹೋಟೆಲ್ ಬಳಿ ಯುವತಿಯೊಬ್ಬಳು ಅನುಮಾನಾಸ್ಪದ ಮೃತಪಟ್ಟಿದ್ದು ಹಲವು ಅನುಮಾನಗಳು ವ್ಯಕ್ತವಾಗಿದೆ. ಅರಕಲಗೂಡು ಮೂಲದ ಭವಿತಾ (23) ಎಂದು ಗುರುತಿಸಲಾಗಿದೆ. ಕಳೆದ 12 ದಿನಗಳಿಂದ ಬಿಎಂ ರಸ್ತೆಯಲ್ಲಿರುವ ಸರಾಯು ಹೋಟೆಲ್ನಲ್ಲಿ ರೂಂ ಪಡೆದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos