ಮುಕ್ತ ವಿವಿ ಪ್ರವೇಶ ಪ್ರಾರಂಭ

ಮುಕ್ತ ವಿವಿ ಪ್ರವೇಶ ಪ್ರಾರಂಭ

ಬೆಂಗಳೂರು, ಆ. 23 :  ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯವು ವಿವಿಧ ಸ್ನಾತಕೊತ್ತರ, ಪದವಿ, ಡಿಪ್ಲೋಮಾ ಮತ್ತು ಸರ್ಟಿಫಿಕೆಟ್ ಕೋರ್ಸ್ ಗಳಿಗೆ 2019 ನೇ ಸಾಲಿನ ಪ್ರವೇಶ ಆರಂಭಿಸಿದೆ ಎಂದು ಮುಕ್ತ ವಿವಿ ಪ್ರದೇಶಿಕ ಇಮ್ರಾಪುರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯವು ಸುಮಾರು 9 ಹೊಸ ಕೋರ್ಸ್ ಗಳನ್ನು ಆರಂಭಿಸಿದ್ದು, ಈಗಾಗಲೇ 10 ಸಾವಿರ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಬೆಂಗಳೂರು ನಗರದ ಆಯಾ ಪ್ರಾಂತ್ಯಗಳಲ್ಲಿ ಅಧ್ಯಯನ ಕೇಂದ್ರಗಳನ್ನು ಆರಂಭಿಸಿಲಾಗಿದೆ ಎಂದು ಹೇಳಿದರು.
ಮ್ಯಾನೇಜ್ ಮೆಂಟ್ ವಿಭಾಗದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ಡಿಪ್ಲೋ ಕೋರ್ಸ್, ಫೈನಾನ್ಸಿಯಲ್ ಮ್ಯಾಜ್ ಮೆಂಟ್, ಆಪರೇಷನ್ ಮ್ಯಾನೇಜ್ ಮೆಂಟ್, ಮಾರುಕಟ್ಟೆ ನಿರ್ವಹಣೆ ಮತ್ತು ಫೈನಾನ್ಸಿಯಲ್ ಮಾರುಕಟ್ಟೆಗಳಿಗೆ ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೆ, ಆನ್ ಲೈನ್ ಮೂಲಕ ಪ್ರವೇಶ ಪಡೆದುಕೊಳ್ಳಬಹುದು ಎಂದರು.
ವಿವಿಧ ಕೋರ್ಸ್ ಗಳ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸವವರು, ಆನ್ ಲೈನ್ ಮೂಲಕ ಬ್ಯಾಂಕಿಂಗ್,ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸ ಬಹುದು. ಹಣ ಪಾವತಿಸಿದ ನಂತರ, ಪ್ರವೇಶದ ಅರ್ಜಿಗಳನ್ನು ಸಲ್ಲಿಸಬೇಕು. ಸಾಮಾನ್ಯ ಕೈಪಿಡಿಯು ಉಚಿತವಾಗಿ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಭಾರತ ಸರ್ಕಾರ ನಿಯಮದಂತೆ ವ್ಯಕ್ತಿ, ವಿಶೇಷ ಚೇತನರ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ವೇತನ ಲಭ್ಯವಿದ್ದು, ಈ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 27. ಆಸಕ್ತ ವಿದ್ಯಾರ್ಥಿಗಳು ಕೂಡಲೇ ಸಂಪರ್ಕಿಸಬೇಕೆಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos