ಇಡಿಯಿಂದ ನೋಟಿಸ್ ಇಲ್ಲ : ಡಿಕೆ ಸುರೇಶ ಸ್ಪಷ್ಟನೆ

ಇಡಿಯಿಂದ ನೋಟಿಸ್ ಇಲ್ಲ : ಡಿಕೆ ಸುರೇಶ ಸ್ಪಷ್ಟನೆ

ಬೆಂಗಳೂರು, ಸೆ. 30 : ಜಾರಿ ನಿರ್ದೇಶನಾಲಯದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿಂದು ತಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯದಿಂದ ನನಗೆ ಈವರೆಗೂ ಯಾವುದೇ ನೋಟಿಸ್ ಬಂದಿಲ್ಲ.
ಒಂದು ವೇಳೆ ನೋಟಿಸ್, ಸಮನ್ಸ್ ಬಂದರೆ ಒಂದು ಕ್ಷಣವೂ ವಿಳಂಬ ಮಾಡದೆ ಅಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದರು. ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ಮಾಧ್ಯಮದವರಿಗೂ ಉತ್ತರ ಕೊಡುತ್ತೇವೆ. ಅಧಿಕಾರಿಗಳಿಗೂ ಉತ್ತರ ನೀಡುತ್ತೇವೆ. ಇದರ ಹಿಂದಿರುವವರಿಗೂ ಉತ್ತರ ನೀಡುತ್ತೇವೆ.

ಫ್ರೆಶ್ ನ್ಯೂಸ್

Latest Posts

Featured Videos