ಐಸಿಸ್ ಉಗ್ರರ ಜತೆಗೆ ತಾಲಿಬಾನ್!

ಐಸಿಸ್ ಉಗ್ರರ ಜತೆಗೆ ತಾಲಿಬಾನ್!

ನ್ಯೂಯಾರ್ಕ್‌, ಜೂನ್. 11, ನ್ಯೂಸ್ ಎಕ್ಸ್ ಪ್ರೆಸ್: ಸಿರಿಯಾ,ಇರಾಕ್‌ನಲ್ಲಿ ಅಮೆರಿಕ ಸೇನೆಯ ದಾಳಿಯಿಂದ ಕಾಲ್ಕಿತ್ತ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಈಗ ಅಫ್ಘಾನಿಸ್ಥಾನವನ್ನೇ ತಮ್ಮ ನೆಲೆಯನ್ನಾಗಿ ರೂಪಿಸಿಕೊಳ್ಳುತ್ತಿದ್ದಾರೆ. ಹೊಸಬರನ್ನು ಭಾರೀ ಸಂಖ್ಯೆಯಲ್ಲಿ ಐಸಿಸ್‌ ಸೇರಿಸಿ ಕೊಳ್ಳುತ್ತಿದ್ದು, ಅವರಿಗೆ ಅಫ್ಘಾನಿಸ್ಥಾನ ದಲ್ಲಿ ತರಬೇತಿ ನೀಡಿ ಅಮೆರಿಕ ಮತ್ತು ಇತರ  ಪಶ್ಚಿಮಾತ್ಯ ದೇಶಗಳ ವಿರುದ್ಧ ದಾಳಿಗೆ ಪ್ರಚೋದಿಸುತ್ತಿದೆ ಎಂದು ಅಮೆರಿಕ ಮತ್ತು ಅಫ್ಘಾನಿಸ್ಥಾನ ದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಅಫ್ಘಾನಿಸ್ಥಾನದಲ್ಲಿ ಅಸ್ತಿತ್ವದಲ್ಲಿದ್ದ ತಾಲಿಬಾನ್‌ಗೂ ಹೆಚ್ಚು ಅಪಾಯಕಾರಿ ಮಟ್ಟವನ್ನು ಐಸಿಸ್‌ ತಲುಪಿದೆ. ಯಾಕೆಂದರೆ ಐಸಿಸ್‌ ಉಗ್ರರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ ಹಾಗೂ ಈ ಉಗ್ರರು ಅಫ್ಘಾನಿಸ್ಥಾನ ಮತ್ತು ಇತರ ದೇಶಗಳ ನಾಗರಿಕರ ಮೇಲೇ ದಾಳಿ ನಡೆಸುತ್ತವೆ. ಭದ್ರತಾ ಅಧಿಕಾರಿಗಳ ಪ್ರಕಾರ ಐಸಿಸ್‌ ಜತೆಗೆ ತಾಲಿಬಾನ್‌ ಕೂಡ ಕೈಜೋಡಿಸಿದ್ದು ಭಾರೀ ಅಪಾಯವನ್ನೇ ಉಂಟು ಮಾಡ ಬಹುದಾಗಿದೆ. ಇತ್ತೀಚೆಗೆ ಕಾಬುಲ್‌ನಲ್ಲಿ ನಡೆದ ಸ್ಫೋಟಗಳು ಇದರ ಮುನ್ಸೂಚನೆ ಎನ್ನಲಾಗಿದೆ.

ನಂಗರ್‌ಹರ್‌ ಪ್ರಾಂತ್ಯವೇ ನೆಲೆ: ಅಫ್ಘಾನಿಸ್ಥಾನ ದ ನಂಗರ್‌ಹರ್‌ ಪ್ರಾಂತ್ಯದಲ್ಲಿ ಐಸಿಸ್‌ ಬೇರು ಬಿಟ್ಟಿದೆ. ಇದು ಪಾಕಿಸ್ಥಾನದ ಗಡಿಗೆ ಹೊಂದಿಕೊಂಡಿದೆ.  ಅಮೆರಿಕದ ಸೇನೆ ಕಾರ್ಯಾಚರಣೆ ನಡೆಸುವುದೂ ಅತ್ಯಂತ ಕಷ್ಟದಾಯಕ. ನಂಗರ್‌ಹರ್‌ನಲ್ಲಿ ನೆಲೆಯೂರಲು ಆರಂಭಿಸಿದ ಉಗ್ರರು, ಅನಂತರ ನೂರಿಸ್ಥಾನ್‌, ಕುನಾರ್‌ ಮತ್ತು ಲಘ…ಮನ್‌ ಪ್ರಾಂತ್ಯಕ್ಕೂ ವ್ಯಾಪಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos