ಪುರುಷ ಮತ್ತು ಮಹಿಳೆಯರ ಟಿ-20 ವಿಶ್ವಕಪ್ ವೇಳಾಪಟ್ಟಿ ಐಸಿಸಿ ಬಿಡುಗಡೆ

ಪುರುಷ ಮತ್ತು ಮಹಿಳೆಯರ ಟಿ-20 ವಿಶ್ವಕಪ್ ವೇಳಾಪಟ್ಟಿ ಐಸಿಸಿ ಬಿಡುಗಡೆ

ದುಬೈಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪುರುಷ ಮತ್ತು ಮಹಿಳೆಯರ ಟಿ-20 ವಿಶ್ವಕಪ್ ವೇಳಾಪಟ್ಟಿ ಐಸಿಸಿ ಬಿಡುಗಡೆ ಮಾಡಿದೆ.

ಮಹಿಳಾ ತಂಡಗಳನ್ನು ಐದು ತಂಡಗಳು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ತಂಡಗಳು ಕ್ವಾಲಿಪೈಯರ್ ಮೂಲಕ ಗ್ರೂಪ್ ಹಂತಕ್ಕೇರಲಿವೆ. ಪುರುಷರ ವಿಭಾಗದಲ್ಲಿ ಒಟ್ಟು ಎಂಟು ತಂಡಗಳು ನೇರ ಅರ್ಹತೆ ಪಡೆದಿದ್ದು ಇನ್ನು ಉಳಿದ ನಾಲ್ಕು ತಂಡಗಳು ಅರ್ಹತ ಪಂದ್ಯಗಳನ್ನಾಡಲಿವೆ.

ಫೆ.21ರಿಂದ ಮಹಿಳೆ ಟಿ-20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಮೊದಲ ಪಂದ್ಯವನ್ನು ಹಾಲಿ ಚಾಂಪಿಯನ್ ಆಸೀಸ್ ಸಿಡ್ನಿ ಮೈದಾನದಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಮಾರ್ಚ್ 8ರಂದು ಫೈನಲ್ ಪಂದ್ಯ ನಡೆಯಲಿದೆ.

ಪುರುಷರ 20-20 ವಿಶ್ವಕಪ್ ಆಕ್ಟೋಬರ್ 24ರಂದು ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ಮೂಲಕ ಆರಂಭವಾಗಲಿದೆ. ಇದಕ್ಕೂ ಮುಂಚೆ ಅಕ್ಟೋಬರ್ 18ರಿಂದ 23ರ ವರೆಗೆ ಅರ್ಹತಾ ಸುತ್ತಿನ ಪಂದ್ಯಗಳು ಜರುಗಲಿವೆ. ನವೆಂಬರ್15ರಂದು ಉಪಾಂತ್ಯಮ ಪಂದ್ಯ ಜರುಗಲಿದೆ.

ಗ್ರೂಪ್ ತಂಡಗಳು

ಆಸ್ಟ್ರೇಲಿಯಾ
ನ್ಯೂಜಿಲೆಂಡ್
ಭಾರತ
ಶ್ರೀಲಂಕಾ
ಕ್ವಾಲಿಫೈಯರ್ 1

ಗ್ರೂಪ್ ಬಿ ತಂಡಗಳು

ಇಂಗ್ಲೆಂಡ್
ವೆಸ್ಟ್ ಇಂಡೀಸ್,
ದಕ್ಷಿಣ ಆಫ್ರಿಕಾ
ಪಾಕಿಸ್ತಾನ
ಕ್ವಾಲಿಫೈಯರ್ 2

ಫೈನಲ್ : ಮಾರ್ಚ್ 8

ಪುರುಷರು ಕ್ವಾಲಿಫೈಯರ್( ಅಕ್ಟೋಬರ್18-23)

ಗ್ರೂಪ್ ಸ್ಟೇಜ್ (ಅಕ್ಟೋಬರ್ 24- ನವೆಂಬರ್)

ಗ್ರೂಪ್ ತಂಡಗಳು

ಪಾಕಿಸ್ತಾನ
ಆಸ್ಟ್ರೇಲಿಯಾ
ವೆಸ್ಟ್ ಇಂಡೀಸ್
ನ್ಯೂಜಿಲೆಂಡ್
ಅರ್ಹತಾ ಸುತ್ತಿನಲ್ಲಿ ಗೆದ್ದ ಎರಡು ತಂಡಗಳು

ಗ್ರೂಪ್ ಬಿ: 
ಭಾರತ
ಇಂಗ್ಲೆಂಡ್
ದಕ್ಷಿಣ ಆಫ್ರಿಕಾ
ಅಪ್ಘಾನಿಸ್ಥಾನ
ಅರ್ಹತಾ ಸುತ್ತಿನಲ್ಲಿ ಗೆದ್ದ ಎರಡು ತಂಡಗಳು
ಸೆಮಿಫೈನಲ್: ನವೆಂಬರ್ 11 ಮತ್ತು 12ಫೈನಲ್ ನವೆಂಬರ್-15

ಫ್ರೆಶ್ ನ್ಯೂಸ್

Latest Posts

Featured Videos